ಚೆನೈ, ಅ 4 (Daijiworld News/RD): ಹಿಂದಿ ಭಾಷೆಯು ಇನ್ನೂ ಡೈಪರ್ ನಲ್ಲಿರುವ ಕೂಸು, ಭಾರತದ ಇತರ ಭಾಷೆಗಳ ಪ್ರಾಚೀನತೆಗೆ ಹೋಲಿಸಿದರೆ ಹಿಂದಿ ತೀರಾ ಹೊಸತು. ತಮಿಳು, ಸಂಸ್ಕೃತ ಮತ್ತು ತೆಲುಗಿಗೆ ಹೋಲಿಸಿದರೆ ಹಿಂದಿ ಇನ್ನೂ ಬೆಳೆಯುತ್ತಿರುವ ಭಾಷೆಯಾಗಿದೆ ಎಂದು ಖ್ಯಾತ ಬಹುಭಾಷ ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿಂದಿ ದಿವಾಸ್ ಕುರಿತು ಸೆಪ್ಟೆಂಬರ್ 14 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತದಲ್ಲಿ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಸಾಂಸ್ಕೃತಿಕವಾಗಿ ಏಕೀಕರಿಸುವಂತೆ ಕರೆ ನೀಡಿದ್ದರು ಇದು ಒಂದು ದೊಡ್ಡ ಸವಾಲನ್ನು ಪ್ರಚೋದಿಸಿದ್ದು, ಇದಕ್ಕೆ ಕಮಲಹಾಸನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಾರ್ಯಕ್ರಮದಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಹಿಂದಿ ಭಾಷೆಯು ಡೈಪರ್ ನಲ್ಲಿರುವ ಪುಟ್ಟ ಮಗು, ತಮಿಳು, ತೆಲುಗಿಗೆ ಹೋಲಿಸಿದರೆ ಹಿಂದಿ ಭಾಷೆ ಈಗ ತಾನೆ ಬೆಳೆಯುತ್ತಿರುವ ಪುಟ್ಟ ಮಗು. ಇದು ನನ್ನ ಅಪಹಾಸ್ಯ ಮಾತಲ್ಲ, ಬದಲಾಗಿ ಇದು ವಾಸ್ತವಿಕ ವಿಚಾರವಾಗಿದೆ. ನಾವು ನಮಗೆ ಇಷ್ಟಪಡುವ ಭಾಷೆಯಲ್ಲಿ ಮಾತನಾಡಬೇಕೆ, ಹೊರತು ಅದನ್ನು ಬಲವಂತವಾಗಿ ಮಾತನಾಡಬೇಕು ಎಂದು ಹೇರುವುದು ತಪ್ಪು ಎಂದು ಹೇಳಿದ್ದಾರೆ.
ವೈವಿಧ್ಯತೆಯಲ್ಲಿ ಏಕತೆ ಕಾಣುವ ದೇಶ ಭಾರತವಾಗಿದ್ದು, ಅದರಲ್ಲೂ ತಮಿಳುನಾಡಿನ ಜನರಿಗೆ ಅಪಾರವಾದ ಭಾಷಾಭಿಮಾನವಿದ್ದು, ಹಿಂದಿ ಭಾಷೆಯನ್ನು ಬಲವಂತಪಡಿಸುವುದು ತಪ್ಪು ಮತ್ತು ತಮಿಳಿನಂತೆ ಇತರ ಭಾಷೆಗಳನ್ನು ತಮ್ಮ ಮಾತೃಭಾಷೆಯಂತೆ ನಂಬಿದವರಿಗೆ ಮೋಸ ಆಗುಲು ಬಿಡುವುದಿಲ್ಲ. ಒಂದು ವೇಳೆ ಇಂತಹ ಬೆಳವಣಿಗೆಯಾದರೆ ಜಲ್ಲಿಕಟ್ಟು ಹೋರಾಟಕ್ಕಿಂತಲೂ ಉಗ್ರ ಹೋರಾಟ ಮಾಡಲಾಗುತ್ತದೆ. ನಾವು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ ಆದರೆ ನಮ್ಮ ಮಾತೃಭಾಷೆ ಯಾವಾಗಲೂ ತಮಿಳು ಆಗಿರುತ್ತದೆ ಎಂದು ಹೇಳಿದ್ದಾರೆ