ಮಧುರೈ, ಅ 4 (Daijiworld News/RD): ವೃದ್ಧ ದಂಪತಿ ಮನೆಗೆ ಮಾರಾಕ ಆಯುಧಗಳೊಂದಿಗೆ ದರೋಡೆ ಮಾಡಲು ಬಂದ ದುಷ್ಕರ್ಮಿಗಳನ್ನು ಧೈರ್ಯದಿಂದ ಹಿಮ್ಮೆಟ್ಟಿದ್ದ ವೃದ್ಧ ದಂಪತಿಗಳ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಎರಡು ತಿಂಗಳ ಬಳಿಕ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರೆ.
ಈ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ತಿರುನೆಲ್ವೇಲಿ ಎಸ್ಪಿ ಪಿ ಅರುಣ್ ಶಕ್ತಿಕುಮಾರ್, ಬಾಲಮುರುಗನ್ (30) ಮತ್ತು ಪೆರುಮಾಲ್ (54) ಬಂಧಿತರು. ಆರೋಪಿ ಬಾಲಮುರುಗನ್ ಅವರ ವಿರುದ್ಧ 38 ಪ್ರಕರಣಗಳು ತಮಿಳುನಾಡಿನಲ್ಲಿ ದಾಖಲಾಗಿದ್ದು, ಪೆರುಮಾಳ್ ವಿರುದ್ಧ ತೂತುಕುಡಿ ಮತ್ತು ತಿರುನೆಲ್ವೇಲಿಯಲ್ಲಿ ಎಂಟು ಪ್ರಕರಣಗಳಿವೆ ಎಂದು ಹೇಳಿದ್ದಾರೆ.
ಆಗಸ್ಟ್ 11ರ ರಾತ್ರಿ ತಿರುನ್ವೇಲಿ ಜಿಲ್ಲೆಯ ಕಲ್ಯಾಣಿಪುರಂನ ತೋಟದ ಮನೆಯಲ್ಲಿ ವಾಸವಾಗಿದ್ದ 75 ವರ್ಷದ ಷಣ್ಮುಗವೇಲು ಮತ್ತು ಅವರ ಪತ್ನಿ 68 ವರ್ಷದ ಸೆಂಥಮರೈ ವೃದ್ಧ ದಂಪತಿಗಳ ಮೇಲೆ ದರೋಡೆಕೋರರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ದರೋಡೆ ಮಾಡಲು ಬಂದ ದುಷ್ಕರ್ಮಿಗಳ ಜತೆ ಸೆಣಸಾಡಿದ ವಿಡಿಯೋ ಕಳೆದ ಹಲವು ತಿಂಗಳ ಹಿಂದೆ ಎಲ್ಲೆಡೆ ವೈರಲ್ ಆಗಿತ್ತು. ಜೊತೆಗೆ ದೇಶಾದ್ಯಂತ ಸುದ್ದಿಯಾಗಿದ್ದು ಜನಸಾಮಾನ್ಯರಷ್ಟೇ ಅಲ್ಲ, ಸೆಲೆಬಿಟ್ರಿಗಳು ಕೂಡ ದಂಪತಿಯ ಶೌರ್ಯವನ್ನು ಮೆಚ್ಚಿಕೊಂಡಾಡಿದ್ದು, ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಅಜ್ಜ-ಅಜ್ಜಿ ತೋರಿಸಿದ ಅಸಾಧಾರಣ ಧೈರ್ಯಕ್ಕಾಗಿ ತಮಿಳುನಾಡು ಸರ್ಕಾರ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.