ಬೆಂಗಳೂರು, ಅ 4 (Daijiworld News/RD): ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿಸಿ ಎಲ್ಲೆಡೆ ಟೀಕೆಗಳು ವ್ಯಕ್ತವಾಗುತ್ತಿದ್ದು, ಖ್ಯಾತ ಬಹುಭಾಷ ನಟ ಪ್ರಕಾರ್ ರೈ ಬಿಜಿಪಿಯ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದು ಈ ಬಗ್ಗೆ ಖಾರವಾಗಿ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ನಲ್ಲಿ ಅವರು, 'ನಾನು ಉಗಿದೆ, ಒರಸ್ಕೊಂಡ್ರಿ. ಈಗ ಜನ ಕ್ಯಾಕರ್ಸ್ಕೊಂಡು ಉಗಿತಾ ಇದ್ದಾರೆ. ಎಷ್ಟುಂತಾ ಒರೆಸ್ಕೋತೀರಪ್ಪ' ಜಸ್ಟ್ ಆಸ್ಕಿಂಗ್ ಎಂಬ ಹ್ಯಾಶ್ ಟ್ಯಾಗ್ ನ್ನು ಬಳಸಿ ಕೇಂದ್ರ ವಿರುದ್ದ ಕಿಡಿಕಾರಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ನೆರೆ ಪರಿಹಾರ ನೀಡುವಲ್ಲಿ ಕೇಂದ್ರ ಸರಕಾರ ವಿಳಂಬ ಧೋರಣೆಯನ್ನು ಅನುರಿಸುತ್ತಿದೆ ಎಂದು ವಿರೋಧಿಸಿ ಜನರು ಮಾಡಿರುವ ಟ್ವೀಟ್ ಗಳನ್ನು ಅಪ್ಲೋಡ್ ಮಾಡಿರುವ ಪ್ರಕಾಶ್ ರಾಜ್, ಇದೀಗ ಈ ಟ್ವೀಟ್ ವೈರಲ್ ಆಗುತ್ತಿದ್ದು, ಪರ ಹಾಗೂ ವಿರೋಧ ಟೀಕೆಗಳು ವ್ಯಕ್ತವಾಗುತ್ತಿವೆ.