ದೊಡ್ಡಬಳ್ಳಾಪುರ, ಅ 4 (Daijiworld News/MSP): ಇತ್ತೀಚೆಗಷ್ಟೇ ಮಡಿಕೇರಿ, ಮಂಡ್ಯ, ತಮಿಳುನಾಡಿನಲ್ಲಿ ಹುಚ್ಚಾಟ ಮೆರೆದು ಸುದ್ದಿಯಾಗಿದ್ದ ನಟ ಹುಚ್ಚ ವೆಂಕಟ್ ಇದೀಗ ಮತ್ತೆ ಹುಚ್ಚಾಟವನ್ನು ಮುಂದುವರೆಸಿದ್ದಾರೆ.
ದೊಡ್ಡಬಳ್ಳಾಪುರದ ರಾಜಾನುಕುಂಟೆ ಬಳಿ ಸುರದೇನೂಪುರ ಟೋಲ್ ಬಳಿ ರಂಪಾಟ ಮಾಡಿದ್ದಲ್ಲದೇ, ನಡು ರಸ್ತೆಯಲ್ಲಿಯೇ ಹುಡುಗಿಯೊಬ್ಬಳಿಗೆ ಕಾರ್ ಹತ್ತುವಂತೆ ತಿಳಿಸಿದ್ದಾರೆ.
ಬೆಳಗ್ಗೆ ಘಾಟಿಯಿಂದ ಬೆಂಗಳೂರಿಗೆ ಬರುತ್ತಿದ್ದ ಹುಚ್ಚಾ ವೆಂಕಟ್ ಯಲಹಂಕ ರಸ್ತೆಯ ದೊಡ್ಡಬಳ್ಳಾಪುರದ ರಾಜಾನುಕುಂಟೆಯ ಸುರದೇನೂಪುರ ಟೋಲ್ ಬಳಿ ಡ್ರಾಪ್ ಕೊಡಲೆಂದು ಕಾರು ನಿಲ್ಲಿಸಿದ್ದಾರೆ. ಆದರೆ ಆ ಯುವತಿ ಕಾರು ಹತ್ತಲು ಒಪ್ಪದೇ ಇದ್ದ ಕಾರಣದಿಂದಾಗಿ ವೆಂಕಟ್ ಮತ್ತೆ ರಂಪಾಟ ಮಾಡಿದ್ದಾರೆ. ಈ ವೇಳೆ ಬುದ್ದಿ ಹೇಳಲು ಹೋದ ಸ್ಥಳೀಯ ವಿರುದ್ದವೂ ಆಕ್ರೋಶವೂ ಹೊರಹಾಕಿದ್ದಾರೆ.
ಮಾತ್ರವಲ್ಲದೆ ನಟ ಹುಚ್ಚ ವೆಂಕಟ್, ತನ್ನ ಕಾರಿನ ಮುಂದಿನ ಗ್ಲಾಸ್, ಡೋರ್ ಗ್ಲಾಸ್ ತಾನೇ ಪುಡಿ ಪುಡಿ ಮಾಡಿಕೊಂಡು ರಂಪಾಟ ಮಾಡಿದ್ದಾರೆ.