ಪಾಟ್ನಾ, ಅ 4 (Daijiworld News/MSP):49 ಸೆಲೆಬ್ರಿಟಿಗಳ ವಿರುದ್ದ ದೇಶದ್ರೋಹ ಎಸಗಲಾಗಿದೆ ಎಂದು ಬಿಹಾರದ ಮುಜಾಫರ್ ಪುರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಭಾರತದಲ್ಲಿ ಹೆಚ್ಚುತ್ತಿರುವ ಗುಂಪು ಹತ್ಯೆ ಪ್ರಕರಣಗಳ ಬಗ್ಗೆ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ 9 ಸೆಲೆಬ್ರಿಟಿಗಳು ಬಹಿರಂಗ ಪತ್ರ ಬರೆದಿದ್ದರು. ಮಣಿರತ್ನ , ರಾಮಚಂದ್ರ ಗುಹಾ, ಅಪರ್ಣಾ ಸೇನ್ , ಮುಂತಾದ ಗಣ್ಯರ ವಿರುದ್ದ ಈ ದೂರು ದಾಖಲಾಗಿದೆ.
ಜೈ ಶ್ರೀ ರಾಮ್ ಎಂಬ ವಾಕ್ಯವೂ ದೇಶದಲ್ಲಿ ಪ್ರಚೋದನಕಾರಿಯಾಗಿ ಯುದ್ಧದ ಕರೆಯಂತೆ ಕೇಳಿಸುತ್ತಿದೆ. ದೇಶದಾದ್ಯಂತ ದಲಿತರು, ಮುಸ್ಲಿಮರು ಹಾಗೂ ಅಲ್ಪ ಸಂಖ್ಯಾತರನ್ನು ಗುಂಪು ಹತ್ಯೆಯಲ್ಲಿ ಕೊಲ್ಲುವ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸಬೇಕು. ಭಿನ್ನಾಭಿಪ್ರಾಯವಿಲ್ಲದೆ ಯಾವುದೇ ಪ್ರಜಾಪ್ರಭುತ್ವ ಇರುವುದಿಲ್ಲ ಎಂದು 49 ಗಣ್ಯ ವ್ಯಕ್ತಿಗಳು ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದುದೇಶದಾದ್ಯಂತ ನಡೆಯುತ್ತಿರುವ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದರು.
ವಕೀಲ ಸುಧೀರ್ ಕುಮಾರ್ ಓಜ್ಙಾ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಸೂರ್ಯ ಕಾಂತ್ ತಿವಾರಿ ಆದೇಶ ಹೊರಡಿಸಿದ 2 ತಿಂಗಳುಗಳ ಬಳಿಕ 49 ಗಣ್ಯರ ವಿರುದ್ಧ ಎಫ್ಐಆರ್ ದಾಖಲಾಗಿದೆ.