ಬೆಂಗಳೂರು, ಅ.04(Daijiworld News/SS): ರಾಜ್ಯಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗಾಗಲೇ ಎಲ್ಲಾ ಕೇಂದ್ರ ಸಚಿವರ ಜೊತೆಗೂ ಮಾತುಕತೆ ನಡೆಸಿದ್ದೇನೆ. ಇನ್ನು 3-4 ದಿನಗಳಲ್ಲಿ ಪರಿಹಾರ ಬಿಡುಗಡೆಯಾಗಲಿದೆ. ದೇಶದ ನೆರೆ ಪೀಡಿತ ಯಾವುದೇ ರಾಜ್ಯಗಳಿಗೂ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ. ರಾಜ್ಯದ ಬೊಕ್ಕಸ ಇನ್ನೂ ಖಾಲಿಯಾಗಿಲ್ಲ. ಖಾಲಿಯಾಗಿದ್ದರೆ ಪರಿಹಾರ ನೀಡಲು ಸಾಧ್ಯವಾಗುತ್ತಿರಲಿಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸಲ್ಲಿಸಿದ್ದ ಅವರಿ ಕುರಿತು ಮುಖ್ಯಕಾರ್ಯದರ್ಶಿಯನ್ನು ಮಾತುಕತೆಗೆ ಕರೆದಿದ್ದಾರೆ ವಿನಃ ತಿರಸ್ಕೃತವಾಗಿಲ್ಲ. ಕರ್ನಾಟಕ ಪ್ರವಾಹ ನಷ್ಟದ ಅಂದಾಜು ವರದಿ ತಿರಸ್ಕರಿಸಿದ ಕೇಂದ್ರ ಕೇಂದ್ರದ ವರದಿಗೂ, ರಾಜ್ಯದ ವರದಿಗೂ ತಾಳೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿರುವ ಹಿನ್ನಲೆಯಲ್ಲಿ ಅಧಿಕಾರಿಗಳನ್ನು ರಾಜಧಾನಿ ದೆಹಲಿಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಪ್ರವಾಹ ಪರಿಹಾರ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೂ, ಕೇಂದ್ರ ನಡೆಸಿದ್ದ ವರದಿಗೂ ತಾಳೆಯಾಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಈ ಸಂಬಂಧ ಸ್ಪಷ್ಟನೆ ಕೇಳಿದೆ. ಪ್ರಸ್ತಾವನೆ ತಿರಸ್ಕರಿಸಿದೆ ಎಂದು ಹೇಳಿರುವುದು ಸುಳ್ಳು ಎಂದು ಹೇಳಿದ್ದಾರೆ.