ನವದೆಹಲಿ, ಅ.04(Daijiworld News/SS): ಪಾಕಿಸ್ತಾನ ವಿರುದ್ಧ ನಡೆದ ಹಲವು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದೇವೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಬಧೌರಿಯಾ ಹೇಳಿದ್ದಾರೆ.
ಫೆಬ್ರವರಿ 27ರಂದು ಬೆಳಗ್ಗೆ ಕಾಶ್ಮೀರದ ಬದಗಾಂನ ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದ ಸಂದರ್ಭದಲ್ಲಿ ತನ್ನದೇ ಹೆಲಿಕಾಪ್ಟರ್ ಅನ್ನು ಶತ್ರು ಪಾಳೆಯದ್ದು ಎಂಬ ಅನುಮಾದಲ್ಲಿ ವಾಯುಪಡೆ ಯೋಧರೇ ಹೊಡೆದುರುಳಿಸಿದ್ದರು. ಎಂಐ 17 ಹೆಲಿಕಾಪ್ಟರ್ ಅನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿದ್ದು ದೊಡ್ಡ ತಪ್ಪು. ಅದರ ಹೊರತಾಗಿ ಪಾಕಿಸ್ತಾನದ ಎಫ್-16 ಅನ್ನು ಹೊಡೆದುರುಳಿಸಿದ್ದೂ ಸೇರಿ ಹಲವು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ಯುದ್ಧಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ, ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದು ಹೇಳಿದರು.