ಬಾಗಲಕೋಟೆ, ಅ 04 (Daijiworld News/MSP): ಕೇಂದ್ರದಿಂದ ಕರ್ನಾಟಕಕ್ಕೆ ನೆರೆ ಪರಿಹಾರ ನೀಡದ ಹಿನ್ನಲೆಯಲ್ಲಿ ನನಗೂ ಆತಂಕವಿದೆ, ಆದರೆ ಕೇಂದ್ರ ಸರ್ಕಾರವೂ ಆರ್ಥಿಕ ಸಂಕಷ್ಟ ಇರಬಹುದು. ಅದಕ್ಕಾಗಿಯೇ ಪ್ರವಾಹ ಪರಿಹಾರ ನೀಡುವಲ್ಲಿ ವಿಳಂಬ ಆಗಿರಬಹುದೇನೋ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಅವರು ಜಮಖಂಡಿಯ ಮುತ್ತೂರಿನಲ್ಲಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ವಿತರಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ನಾನು ಈ ವಿಚಾರವಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಇದಕ್ಕೆ ಹೇಗೆ ಸ್ಪಂದಿಸುತ್ತಾರೆ ಎಂದು ನೋಡೋಣ. ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೇ, ನಮ್ಮ ನೆರೆಯ ರಾಜ್ಯಕ್ಕೂ ಮಹಾರಾಷ್ಟ್ರ, ಗುಜರಾತ್ನಲ್ಲೂ ಪ್ರವಾಹ ಬಂದಿದೆ. ಅಲ್ಲಿಯೂ ಪರಿಹಾರ ಕೊಟ್ಟಿಲ್ಲ. ಆದರೂ ನಮ್ಮ ರಾಜ್ಯದ ಜನರ ಭಾವನೆಗಳಿಗೆ ಪ್ರಧಾನಿ ಸ್ಪಂದಿಸುತ್ತಾರೆ ಎಂಬ ಆಶಾವಾದವಿದೆ.
ಪ್ರವಾಹ ಪರಿಹಾರ ನೀಡದಿರಲು ಆರ್ಥಿಕ ಕುಸಿತ ಕಾರಣ ಇರಬಹುದು. ಪ್ರಧಾನಿ ಮೋದಿ ಅವರು ಅನೇಕ ಒಳ್ಳೆಯ ಜನಪರ ಯೋಜನೆಗಳನ್ನು ನೀಡಿದ್ದಾರೆ. ಅಭಿವೃದ್ದಿ ಕೆಲಸಗಳು ದೇಶದಲ್ಲಿ ನಡೆಯುತ್ತಿವೆ ಎಂದರು.