ಮುಂಬೈ, ಅ 5 (Daijiworld News/RD): ಎಂಬಿಎ ಪದವೀಧರಾದ ದಂಪತಿಗಳು, ಕೈ ತುಂಬಾ ಸಂಬಳ ಬರುವ ಕೆಲಸವಿದ್ದರು, ಮುಂಜಾನೆ 4 ಗಂಟೆಯಿಂದ ರಸ್ತೆ ಬದಿ ಕ್ಯಾಂಟೀನ್ ನಡೆಸಿ ಆ ಹಣವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸದೆ ಮನೆಕೆಲಸದಾಕೆಗೆ ನೆರವು ನೀಡುತ್ತಿದ್ದಾರೆ. ಇದೀಗ ದಂಪತಿಗಳ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ರೈಲ್ವೆ ನಿಲ್ದಾಣದಲ್ಲಿ ಬೆಳಗಿನ ಜಾವ ಉತ್ತಮ ಉಪಹಾರಕ್ಕಾಗಿ ದೀಪಾಲಿ ಎಂಬವರು ಹುಡುಕಾಟ ನಡೆಸಿದಾಗ ಅಶ್ವಿನಿ ಶೆಣೈ ದಂಪತಿಗಳ ರಸ್ತೆ ಬದಿ ಕ್ಯಾಂಟೀನ್ ಗೆ ಹೋದಾಗ, ಅಲ್ಲಿನ ಉಪಹಾರದ ರುಚಿಗೆ ಮಾರುಹೋಗಿ ದಂಪತಿಗಳಲ್ಲಿ ಹೆಚ್ಚಿನ ವಿಚಾರವನ್ನು ತಿಳಿದುಕೊಂಡಾಗ ಅವರ ಮಾನವೀಯ ಕಾರ್ಯ ಬೆಳಕಿಗೆ ಬಂದಿದೆ. ಇವರ ಈ ಕಾರ್ಯವನ್ನು ದೀಪಾಲಿ ಭಾಟಿಯಾ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು, ಇವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಅಶ್ವಿನಿ ಶೆಣೈ ಮತ್ತು ಅವರ ಪತಿ ಕೆಲಸಕ್ಕೆ ಹೋಗುವ ಮೊದಲು ತಮ್ಮ ಮನೆ ಕೆಲಸದವಳು ಮಾಡಿದ ಅಡುಗೆಯನ್ನು ರಸ್ತೆ ಬದಿಯಲ್ಲಿ ಮಾರುತ್ತಾರೆ. ಕೆಲಸದಾಕೆಗೆ 55 ವರ್ಷ ಆಕೆಯ ಪತಿ ಪಾರ್ಶ್ವವಾಯು ಪೀಡಿತರು. ಅವರಿಗೆ ಸಹಾಯಕವಾಗಲಿ ಎಂದು ದಂಪತಿಗಳು ಆಹಾರ ಮಾರುತ್ತಾರೆ.
ಅಶ್ವಿನಿ ಶೆಣೈ ಮತ್ತು ಅವರ ಪತಿ ಮುಂಬೈನ ಕಂಡಿವಲಿ ರೈಲ್ವೆ ನಿಲ್ದಾಣದ ಬಳಿ ಕ್ಯಾಂಟೀನ್ ನಡೆಸುತ್ತಿದ್ದು, ಇಬ್ಬರೂ ಎಂಬಿಎ ಪದವೀಧರಾಗಿದ್ದು, ಇವರು ಕೆಲಸಕ್ಕೆ ಹೋಗುವ ಮುನ್ನ ರಸ್ತೆ ಬದಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದು, ಬೆಳಗ್ಗೆ 4 ಗಂಟೆಯಿಂದ 10 ಗಂಟೆ ತನಕ ಉಪ್ಪಿಟ್ಟು, ಇಡ್ಲಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಾರೆ. ಬಳಿಕ ಇಬ್ಬರೂ ಕೆಲಸಕ್ಕೆ ಹೊರಟು ಹೋಗುತ್ತಾರೆ.