ತಿರುವನಂತಪುರಂ, ಅ 6 (Daijiworld News/RD): ಕಳ್ಳರು ತಾವು ಕದ್ದ ವಸ್ತುವನ್ನು ಸಾಗಾಣಿಕೆ ನಡೆಸಲು ವಿಭಿನ್ನ ಸಂಚು ರೂಪಿಸುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ತಾನು ಕದ್ದ ಚಿನ್ನವನ್ನು ಸಾಗಾಣಿಕೆ ಮಾಡಲು ತನ್ನ ಹೇರ್ ಸ್ಟೈಲ್ ಅನ್ನೇ ಬದಲಾಯಿಸಿದ್ದಾನೆ.
ಈತನ ಹೇರ್ ಸ್ಟೈಲ್ ಗೆ ಅನುಮಾನಗೊಂಡ ಪೊಲೀಸರು ಆತನನ್ನು ಪರಿಶೀಲನೆ ನಡೆಸಿದಾಗ, ಆತನ ನೆತ್ತಿಯ ಮೇಲೆ ವಿಗ್ ಇಟ್ಟು ಅದರೊಳಗೆ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದನು.ಬಂಧಿತನನ್ನು ಮಲಪ್ಪುರಂನ ನೌಶಾದ್ ಎಂದು ಗುರುತಿಸಲಾಗಿದೆ. ಈತ ಯುಎಇಯ ಶಾರ್ಜಾದಿಂದ ವಿಮಾನ ನಿಲ್ದಾಣಕ್ಕೆ ಬಂದಿದ್ದನು. ಈತ ಪೊಲೀಸರಿಗೆ ಅನುಮಾನ ಬಾರದಂತೆ ನೆತ್ತಿಯ ಮಧ್ಯದ ಸುತ್ತ ಕೂದಲನ್ನು ಬೋಳಿಸಿಕೊಂಡ ರೀತಿಯಲ್ಲಿ ಮಾಡಿ, ತಲೆಯ ಮಧ್ಯ ಭಾಗದಲ್ಲಿ ವಿಗ್ ಅಡಿಯಲ್ಲಿ 1.13 ಕೆಜಿ ಚಿನ್ನವನ್ನು ಸಾಗಾಟ ಮಾಡಲು ಯತ್ನಿಸಿದ್ದನು.
ಕೊಚ್ಚಿನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (ಸಿಐಎಎಲ್)ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆತನ ವಿಗ್ ನೋಡಿ ಅನುಮಾನಗೊಂಡು ಪರಿಶೀಲಿನೆ ನಡೆಸಿದಾಗ ಈತನ ವಿಚಿತ್ರ ಸ್ಟೈಲ್ ನ ಅಸಲಿ ಮುಖ ಗಮನಿಸಿದ ಪೊಲೀಸರು ನಂತರ ಆತನನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಿದ್ದಾರೆ. ಆಗ ಆತನ ತಲೆ ಮೇಲಿದ್ದ ವಿಗ್ ಕೆಳಗೆ 1.13 ಕೆಜಿ ಚಿನ್ನ ಪತ್ತೆಯಾಗಿದೆ. ಚಿನ್ನವು ಪೇಸ್ಟ್ ರೀತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಆತನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.