ತಿರುವನಂತಪುರ, ಅ.07(Daijiworld News/SS): ತಾಯಿಯೇ ನಾಲ್ಕು ವರ್ಷದ ಪುಟ್ಟ ಬಾಲಕಿಯನ್ನು ಕೊಂದ ದುರಂತ ಘಟನೆಯೊಂದು ವರದಿಯಾಗಿದೆ.
ಕೇರಳದ ಕೊಲ್ಲಂನಲ್ಲಿ ಈ ದುರ್ಘಟನೆ ನಡೆದಿದ್ದು, ಮಗಳ ಸಾವಿಗೆ ಕಾರಣವಾದ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾತ್ರವಲ್ಲ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಯನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಅ.6ರಂದು ಪುಟ್ಟ ಬಾಲಕಿ ಹಠ ಮಾಡಿದ್ದಾಳೆ. ಅಮ್ಮ ಕೊಟ್ಟ ಆಹಾರವನ್ನು ತಿನ್ನುವುದೇ ಇಲ್ಲವೆಂದು ವಿಪರೀತ ರಚ್ಚೆ ಹಿಡಿದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ತಾಯಿ ಆಕೆಗೆ ಥಳಿಸಿದ್ದಾಳೆ. ಪರಿಣಾಮ, ಮಗುವಿಗೆ ಗಂಭೀರ ಗಾಯಗಳಾಗಿದೆ. ತೀವ್ರ ಅಸ್ವಸ್ಥಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ ಎಂದು ತಿಳಿದುಬಂದಿದೆ.
ಈ ಘಟನೆಗೆ ಅಸಲಿ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಈ ಮಹಿಳೆ ವೃತ್ತಿಯಲ್ಲಿ ನರ್ಸ್ ಆಗಿದ್ದು, ಸದ್ಯ ಜೈಲುಪಾಲಾಗಿದ್ದಾರೆ ಎನ್ನಲಾಗಿದೆ.