ಬೆಂಗಳೂರು, ಅ 7 (Daijiworld News/RD): ಕೇಂದ್ರ ಸಕಾರವು ರಾಜ್ಯದ ನೆರೆ ಪರಿಹಾರಕ್ಕಾಗಿ ಕೇವಲ ರೂ.1,200 ಕೋಟಿ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿರುವ ಬಗ್ಗೆ, ಕೇಂದ್ರ ಸರ್ಕಾರದ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರೈ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.
ಅವರು ಟ್ವೀಟರ್ ನಲ್ಲಿ, ’ಹೊದ್ದುಕೊಳ್ಳಲು ಕಂಬಳಿ ಕೇಳಿದರೆ, ಕೇವಲ ಕರ್ಚೀಫ್ ಭಿಕ್ಷೆ ಕೊಟ್ಟು ಬೀಗುತ್ತಿದ್ದಾರೆ ಉತ್ತರ ಕುಮಾರರು. ಪ್ರಜೆಗಳೇ ಮರಳಾಗದಿರಿ. ದೇಶದ ದುಡ್ಡು ನಮ್ಮದು. ಸಂಕಷ್ಟದಲ್ಲಿ ಪಕ್ಷಾತೀತರಾಗಿರಿ. ಪ್ರಶ್ನಿಸಿವುದನ್ನು ನಿಲ್ಲಿಸಬೇಡಿ. ಯಾರೇ ಆದರೂ ನಾವು ಉಗಿಯುತ್ತಿದ್ದರೆ ಮಾತ್ರ ಕೆಲಸ ಮಾಡುವುದು ಅಲ್ವಾ’ ಎಂದು ವ್ಯಂಗ್ಯವಾಡಿದ್ದಾರೆ ಟ್ವೀಟ್ ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಜನರು ಮಾಡಿರುವ ಟೀಕೆಗಳನ್ನು ಪ್ರಕಾಶ್ ಹಂಚಿಕೊಂಡಿದ್ದಾರೆ.