ಮುಂಬೈ, ಅ 7 (Daijiworld News/RD): ಬಿಜೆಪಿ ಕಾರ್ಪೊರೇಟರ್ ಮನೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಐದು ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಜಲಗಾಂ ಜಿಲ್ಲೆಯಲ್ಲಿ ನಡೆದಿದೆ.
ಬಿಜೆಪಿ ಕಾರ್ಪೊರೇಟರ್ ರವೀಂದ್ರ ಕಾರಟ್, ಅವರ ಸಹೋದರ ಸುನಿಲ್ ಕಾರಟ್ (50), ಪ್ರೇಮಸಾಗರ್ (26), ರೋಹಿತ್ (25) ಮತ್ತು ಸುಮಿತ್ ಫೆಡ್ರೆ ಈ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ನಿನ್ನೆ ತಡರಾತ್ರಿ ಮೂವರು ಮುಸುಕುಧಾರಿಗಳು ನಾಡ ಪಿಸ್ತೂಲು ಚಾಕುಗಳೊಂದಿಗೆ ಬಿಜೆಪಿ ಕಾರ್ಪೊರೇಟರ್ ರವೀಂದ್ರ ಕಾರಟ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕಾರ್ಪೊರೇಟರ್ ರವೀಂದ್ರ ಕಾರಟ್ ಹಾಗೂ ಕುಟುಂಬ ಸದಸ್ಯರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ದಾಳಿಯ ನಂತರ ಪರಾರಿ ಆಗಿದ್ದ ಅವರು ನಂತರ ಪೊಲೀಸ್ ಠಾಣೆಗೆ ಹೋಗಿ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿದ್ದಾರೆ.