ಬೆಂಗಳೂರು, ಅ 07 (DaijiworldNews/SM): ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದು ಬಳಿಕ ಬಿಜೆಪಿ ಸರಕಾರ ಅಧಿಕಾರ ಪಡೆದ ಬಳಿಕವೂ ರಾಜಕೀಯ ಮೇಲಾಟಗಳು ಮುಂದುವರೆದಿದೆ. ಇದೀಗ ರಾಜ್ಯದಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತದೆ.
ಇದೀಗ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನ ನೀಡುವಂತೆ ತಾವು ಪಕ್ಷದ ಹೈಕಮಾಂಡ್ಗೆ ನಾನು ದುಂಬಾಲು ಬಿದ್ದಿಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಅಗತ್ಯ ಪಕ್ಷಕ್ಕೆ ಇದ್ದಲ್ಲಿ ನನಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಬಹುದು. ಒಂದೊಮ್ಮೆ ಅಗತ್ಯವಿಲ್ಲದೇ ಇದ್ದಲ್ಲಿ, ಬೇರೆಯವರಿಗೆ ನೀಡಬಹುದೆಂದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೇ ವಿಧಾನಸಭೆ ವಿರೋಧ ಪಕ್ಷದ ನಾಯಕರು ಆಗಿರಬೇಕು. ಎರಡೂ ಹುದ್ದೆಗಳನ್ನು ಒಬ್ಬರೇ ಇದ್ದರೆ ಸೂಕ್ತ ಎಂದು ನನ್ನ ಅಭಿಪ್ರಾಯ ಎಂದಿದ್ದಾರೆ.