ಜಮ್ಮು, ಅ.08(Daijiworld News/SS): ಭಾರತದ ಗಡಿಯೊಳಗೆ ನುಸುಳುತ್ತಿದ್ದ ಓರ್ವ ಶಂಕಿತ ಉಗ್ರನನ್ನು ಯೋಧರು ಜಮ್ಮು ಕಾಶ್ಮೀರದಲ್ಲಿ ಬಂಧಿಸಿದ್ದಾರೆ.
ಜಮ್ಮುವಿನ ಆರ್ ಎಸ್ ಪುರ (ರಣ್ ಬೀರ್ ಸಿಂಗ್ ಪುರ) ಸೆಕ್ಟರ್ ಎಂಬಲ್ಲಿ ಯೋಧರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಬಂಧಿತನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ.
ಭಾರತದ ಗಡಿಯೊಳಗೆ ಪಾಕಿಸ್ತಾನ ಮೂಲದ ನೂರಾರು ಉಗ್ರರು ನುಸುಳಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ಬೆನ್ನಲ್ಲೇ, ಗಡಿಯೊಳಗೆ ನುಸುಳುತ್ತಿದ್ದ ಓರ್ವ ಶಂಕಿತ ಉಗ್ರನನ್ನು ಬಿ ಎಸ್ ಎಫ್ ಯೋಧರು ಬಂಧಿಸಿದ್ದಾರೆ.
ಯೋಧರು ವಿಚಾರಣೆಗೊಳಪಡಿಸಿದ ವೇಳೆ ಆತ ತನ್ನ ಹೆಸರು ಹುಸೇನ್ ಫಾರೂಕ್ ಎಂದು ಹೇಳಿಕೊಂಡಿದ್ದು, ಆತ ಸಿಯಾಲ್ ಕೋಟ್ ನಿವಾಸಿ ಎಂದು ತಿಳಿದುಬಂದಿದೆ. ಪ್ರಸ್ತುತ ಆತನನ್ನು ವಶಕ್ಕೆ ಪಡೆದಿರುವ ಬಿ ಎಸ್ ಎಫ್ ಯೋಧರು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.