ನವದೆಹಲಿ, ಅ 8 (Daijiworld News/RD): 87ನೇ ವಾಯುಸೇನಾ ದಿನ ಹಾಗೂ ದಸರಾಹಬ್ಬದ ಸುಸಂದರ್ಭದಲ್ಲಿ, ವಿವಾದದ ಕೇಂದ್ರಬಿಂದುವಾಗಿದ್ದ ರಫೇಲ್ ಫೈಟರ್ ಜೆಟ್ ಇಂದು ಅಧಿಕೃತವಾಗಿ ಭಾರತೀಯ ಸೇನೆ ಸೇರಲಿದ್ದು, ಭಾರತೀಯ ವಾಯುಸೇನೆಗೆ ನೂರಾನೆ ಬಲ ನೀಡಲಿದೆ. ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಗೆ ತೆರಳಿದ್ದು, ಅದ್ಧೂರಿ ಕಾರ್ಯಕ್ರಮದಲ್ಲಿ ರಫೇಲ್ ಭಾರತದ ಕೈ ಸೇರಲಿದೆ.
ಭಾರತದ ವಶಯುಪಡೆಯ ವೈಮಾನಿಕ ಯುದ್ದ ಸಾಮಾರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲು ಸಹಕಾರಿಯಾಗುವ ಮೊಟ್ಟಮೊದಲ ಯುದ್ಧ ವಿಮಾನ ರಫೇಲ್ ಆಗಿದೆ. RB-01 ಎಂಬ ಹೆಸರಿನ ರಫೇಲ್ ಯುದ್ಧ ವಿಮಾನ ಭಾರತ ಫ್ರಾನ್ಸ್ ನಿಂದ ಖರೀದಿ ಮಾಡುತ್ತಿರುವ 36 ಯುದ್ಧ ವಿಮಾನಗಳಲ್ಲಿ ಮೊದಲನೆಯದಾಗಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಈ ಯುದ್ಧ ವಿಮಾನ ಎದುರಾಳಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಸೋಲಿಸಲು ಅತ್ಯಂತ ಸಮರ್ಥವಾಗಿದೆ ಎಂಬುದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.
RB-01 ಎಂದರೆ ಏರ್ ಮಾರ್ಶಲ್ ಆರ್ ಕೆ ಎಸ್ ಬಾದುರಿಯಾ ಅವರ ಹೆಸರಿನ ಇನಿಶಿಯಲ್ ಆಗಿದ್ದು, ಭಾರತ ಮತ್ತು ಫ್ರಾನ್ಸ್ ನಡುವಿನ ರಫೇಲ್ ಒಪ್ಪಂದದಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದರು. ರಫೇಲ್ ಜೆಟ್ ಎದುರಾಳಿ ಸೇನೆಯ ಬಳಿಗೆ ತೆರಳದೆ ದೂರದಿಂದಲೇ ದಾಳಿ ನಡೆಸಬಲ್ಲ ಸಂಬಂಧ ಹೊಂದಿದೆ. 36 ರಫೆಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದಕ್ಕೆ ಸೆಪ್ಟೆಂಬರ್ 23, 2016ರಂದು ಶುಕ್ರವಾರ ಉಭಯ ದೇಶಗಳ ಪ್ರತಿನಿಧಿಗಳು ಸಹಿ ಹಾಕಿದ್ದರು. ಸುಮಾರು 7.8 ಬಿಲಿಯನ್ ಯುರೋ (ಸುಮಾರು 780 ಕೋಟಿ) ವ್ಯವಹಾರಿಕ ಮೊತ್ತ ಇದಾಗಿದ್ದು, ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಜಿಯಾನ್ ವೈವೆಸ್ ಲೆಡ್ರಿಯನ್ ಅವರು ದೆಹಲಿಯಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಈ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಹಗರಣ ನಡೆದೆ ಎಂಬ ದೂರು ಎನ್ ಡಿಎ 1 ಸರ್ಕಾರದ ವಿರುದ್ಧ ಕೇಳಿಬಂದಿತ್ತು. ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ವಿಪಕ್ಷಗಳಿಗೆ ಇದೇ ಮುಖ್ಯ ವಿಷಯವಾಗಿತ್ತು.