ನವದೆಹಲಿ, ಅ.08(Daijiworld News/SS): ಪುಲ್ವಾಮಾ ದಾಳಿಯು ಭದ್ರತಾ ವ್ಯವಸ್ಥೆ ಮೇಲೆ ನಿರಂತರವಾಗಿ ಬೆದರಿಕೆಯಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಆರ್ ಕೆಎಸ್ ಭದೌರಿಯಾ ಹೇಳಿದ್ದಾರೆ.
87ನೇ ವಾಯುಸೇನಾ ದಿನಾಚರಣೆಯನ್ನು ಉದ್ದೇಶಿಸಿ ಹಿಂದೊನ್ ವಾಯುನೆಲೆಯಲ್ಲಿ ಮಾತನಾಡಿದ ಅವರು, ರಕ್ಷಣಾ ಸ್ಥಾಪಕ ಕೇಂದ್ರಗಳು ಎಲ್ಲಾ ಸಮಯಗಳಲ್ಲಿಯೂ ಎಚ್ಚರವಾಗಿರಬೇಕು ಎಂಬುದಕ್ಕೆ ಕಳೆದ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಹತ್ಯಾ ದಾಳಿ ಎಚ್ಚರಿಕೆಯ ಗಂಟೆಯಾಗಿದೆ. ಭಯೋತ್ಪಾದನೆಯ ದುಷ್ಕರ್ಮಿಗಳನ್ನು ಶಿಕ್ಷಿಸಲು ರಾಜಕೀಯ ನಾಯಕತ್ವದ ಸಂಕಲ್ಪವು ಬಾಲಕೋಟ್ ವಾಯುದಾಳಿಯ ಕಾರ್ಯತಂತ್ರದ ಪ್ರಸ್ತುತತೆಯಾಗಿದೆ ಎಂದು ಹೇಳಿದರು.
ಪುಲ್ವಾಮಾ ದಾಳಿಯು ಭದ್ರತಾ ವ್ಯವಸ್ಥೆ ಮೇಲೆ ನಿರಂತರವಾಗಿ ಬೆದರಿಕೆಯಿದೆ ಎಂಬುದನ್ನು ನೆನಪಿಸುತ್ತದೆ. ಇದಕ್ಕೆ ಪ್ರತಿಯಾಗಿ ಭಾರತ ನಂತರ ಕೈಗೊಂಡ ವಾಯುದಾಳಿ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಸರ್ಕಾರದ ನೀತಿಯಲ್ಲಿ ಪ್ರಮುಖ ಬದಲಾವಣೆಯಾಗಿದ್ದನ್ನು ಗುರುತಿಸುತ್ತದೆ. ಬಾಲಾಕೋಟ್ ವಾಯುದಾಳಿ ಭಯೋತ್ಪಾದನೆಯ ತಪ್ಪಿತಸ್ಥರನ್ನು ಮಟ್ಟಹಾಕಲು ನಮ್ಮ ರಾಜಕೀಯ ನಾಯಕತ್ವ ತೆಗೆದುಕೊಂಡ ಪ್ರಮುಖ ನಿರ್ಧಾರವಾಗಿತ್ತು. ಭಯೋತ್ಪಾದಕ ದಾಳಿಯನ್ನು ನಿಭಾಯಿಸುವ ಸರ್ಕಾರದ ನೀತಿಯಲ್ಲಿ ಪ್ರಮುಖ ಬದಲಾವಣೆಯಾಗಿರುವುದು ಕಂಡುಬರುತ್ತಿದೆ ಎಂದು ಅವರು ಹೇಳಿದರು.