ನವದೆಹಲಿ, ಅ 08 (DaijiworldNews/SM): ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ದೇಶವೇ ಎದುರು ನೋಡುತ್ತಿದ್ದ ರಫೇಲ್ ಯುದ್ಧ ವಿಮಾನ ಕಡೆಗೂ ಭಾರತದ ಕೈ ಸೇರಿದೆ. ರಫೇಲ್ ಯುದ್ಧ ವಿಮಾನವನ್ನು ಫ್ರಾನ್ಸ್ ಸರಕಾರ ಭಾರತಕ್ಕೆ ಹಸ್ತಾಂತರಿಸಿದೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಚರ್ಚಿಸಲಾಗಿದೆ. ವಿಮಾನದ ಕಾರ್ಯತಂತ್ರಗಳ ಬಗ್ಗೆಯೂ ಕೂಡ ಚರ್ಚಿಸಲಾಯಿತು. ಬಳಿಕ ಭಾರತದ ಕೈಗೆ ಯುದ್ಧ ವಿಮಾನ ಹಸ್ತಾಂತರ ಮಾಡಲಾಗಿದೆ. ಪ್ಯಾರಿಸ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಯುದ್ಧ ವಿಮಾನವನ್ನು ಹಸ್ತಾಂತರಿಸಲಾಗಿದೆ. ಫ್ಯಾರಿಸ್ ನ ಮೆರಿಗ್ನಾಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಸಾಲ್ಟ್ ಕಂಪನಿ ಸಿಇಓ ಎರಿಕ್ ಟ್ರಾಪಿಯರ್ ರಫೇಲ್ ಯುದ್ಧ ವಿಮಾನವನ್ನು ರಾಜನಾಥ್ ಸಿಂಗ್ ಅವರಿಗೆ ಔಪಚಾರಿಕವಾಗಿ ಹಸ್ತಾಂತರಿಸಿದ್ದಾರೆ.
ಬಳಿಕ ಮಾತನಾಡಿರುವ ಸಚಿವ ರಾಜನಾಥ್ ಸಿಂಗ್ ಭಾರತೀಯ ವಾಯುಪಡೆಗೆ ರಫೇಲ್ ಸೇರ್ಪಡೆಯೊಂದಿಗೆ ಸೇನೆಗೆ ಹೊಸ ಬಲ ಸಿಕ್ಕಿದೆ. ಇದು ಭಾರತೀಯ ವಾಯುಪಡೆಯನ್ನು ಇನ್ನಷ್ಟು ಬಲವರ್ದನೆ ಮಾಡಲಿದೆ ಎಂದರು. ಇನ್ನು ವಿಮಾನವನ್ನು ಹಸ್ತಾಂತರಗೊಳಿಸುವ ಸಂದರ್ಭದಲ್ಲಿ ಸಚಿವ ರಾಜನಾಥ್ ಸಿಂಗ್ ಅವರು ದಸರಾ ಆಚರಣೆ ಹಿನ್ನೆಲೆಯಲ್ಲಿ ಸಾಂಪ್ರಾದಾಯಿಕವಾಗಿ ಶಸ್ತ್ರ ಪೂಜೆಯನ್ನು ರಫೇಲ್ ಯುದ್ಧ ವಿಮಾನಕ್ಕೆ ನೆರವೇರಿಸಿದರು.