ಶ್ರೀನಗರ, ಅ 08 (DaijiworldNews/SM): ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬರೋಬ್ಬರಿ 72 ವರ್ಷಗಳ ಬಳಿಕ ಹಿಂದೂ ದಂಪತಿ ಪೂಜೆ ಸಲ್ಲಿಸಿದೆ. ಪಿಒಕೆಯಲ್ಲಿರುವ ಶಾರದಾ ಪೀಠದಲ್ಲಿ ಪೂಜೆ ಸಲ್ಲಿಸಲಾಗಿದೆ. ಜಮ್ಮುಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ತೆರವುಗೊಳಿಸಿದ ಬಳಿಕ ಇದು ಸಾಧ್ಯವಾಗಿದೆ. ಇನ್ನು ಅದರ ಬಳಿಕ ಕಾಶ್ಮೀರದಲ್ಲಿ ಹಲವು ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ಕೂಡ ಆರಂಭಗೊಂಡಿದೆ.
ಭಾರತ ಅಧ್ಯಾತ್ಮಿಕ ಇತಿಹಾಸದಲ್ಲಿ ಪ್ರಮುಖವಾಗಿರುವ ಶಂಕರಾಚಾರ್ಯರಿಂದ ಈ ಪೀಠ ಸ್ಥಾಪನೆಯಾಗಿತ್ತು. ಈ ಪೀಠದಲ್ಲಿ ಇದೀಗ ಸುಮಾರು ಎಪ್ಪತ್ತೆರಡು ವರ್ಷಗಳ ಬಳಿಕ ಪೂಜೆ ನೆರವೇರಿದೆ.
ಪಿ.ಟಿ.ವೆಂಕಟರಾಮನ್ ಮತ್ತು ಸುಜಾತಾ ದಂಪತಿ ಈ ಪೂಜೆ ನೆರವೇರಿಸಿದೆ.
ಭಾರತೀಯರಾದ ಇವರು ಹಾಂಕ್ಕಾಂಗ್ನಲ್ಲಿ ನೆಲೆಸಿದ್ದಾರೆ. ಆದರೆ ಜಮ್ಮುವಿನಲ್ಲಿರುವ ಶಾರದಾ ಪೀಠಕ್ಕೆ ಪೂಜೆ ಸಲ್ಲಿಸಲೆಂದೇ ಇವರು ಆಗಮಿಸಿದ್ದರು. ಪಿಓಕೆಯಲ್ಲಿ ಸಾಮಾಜಿಕ ಸಂಸ್ಥೆಗಳ ನೆರವಿನೊಂದಿಗೆ ಈ ಪೂಜೆ ನೆರವೇರಿಸಿದ್ದಾರೆ. ಜೆಯನ್ನು ವೆಂಕಟರಾಮನ್ ಮತ್ತು ಸುಜಾತಾ ದಂಪತಿ ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ಇದೀಗ ದೇಶದೆಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.