ಹೊಸದೆಹಲಿ, ಅ.09(Daijiworld News/SS): ಸರಕಾರದ ಮಹಿಳಾ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಗೊಳಿಸುವಲ್ಲಿ ಜನತೆಯ ಸಹಕಾರ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹಿಳೆಯರ ಸ್ವಾವಲಂಬನೆ ಮತ್ತು ಅಭಿವೃದ್ಧಿಗೆ ಶ್ರಮಿಸುವಂತೆ ದೇಶದ ಜನತೆಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದುರ್ಗಾ ಮಾತೆಯ ಶಕ್ತಿಯ ಸ್ಫೂರ್ತಿಯೊಂದಿಗೆ ಮಹಿಳೆಯರ ಸ್ವಾಭಿಮಾನ ಹಾಗೂ ಘನತೆಯನ್ನು ಹೆಚ್ಚಿಸೋಣ ಎಂದು ಹೇಳಿದರು.
ಇದೇ ವೇಳೆ, ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಭಾಗವಾಗಿ ಒಂದು ಬಾರಿಯ ಪ್ಲಾಸಿಕ್ ಬಳಕೆ ತ್ಯಜಿಸುವಂತೆ ಜನತೆಗೆ ಕರೆ ನೀಡಿದರು. ಅಲ್ಲದೆ ಇಂಧನ, ಆಹಾರ ಹಾಗೂ ಜಲ ಸಂರಕ್ಷಣೆಗೆ ಮುಂದಾಗೋಣ ಎಂದು ತಿಳಿಸಿದರು.
ತಮ್ಮ ಸಾಧನೆಯ ಮೂಲಕ ಬೇರೆಯವರಿಗೆ ಪ್ರೇರಕ ಶಕ್ತಿಯಾಗಿರುವ ನಿಮ್ಮ ನೆರೆಹೊರೆಯ ಸಾಧಕ ಹೆಣ್ಣು ಮಕ್ಕಳನ್ನು ಗುರುತಿಸಿ ಸನ್ಮಾನಿಸಿ. ಭಾರತ ಹಬ್ಬಗಳ ತವರಾಗಿದ್ದು ನವರಾತ್ರಿ ಮುಗಿಯುತ್ತಿದ್ದಂತೆ ದೀಪಾವಳಿ ಬರಲಿದೆ. ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮಿ ಪೂಜೆ ಮಾಡುವ ಸಂಪ್ರದಾಯ ನಮ್ಮಲ್ಲಿದೆ ಎಂದು ಹೇಳಿದರು.