ಚೆನ್ನೈ, ಅ 09 (Daijiworld News/MSP): ರೈಲ್ವೆ ನಿಲ್ದಾಣಗಳಲ್ಲಿ ಇಲಿ ಕಾಟ ಸಾಮಾನ್ಯ. ರೈಲ್ವೆ ಇಲಾಖೆ ಸ್ವಚ್ಚತೆಗೆ ಹೆಚ್ಚು ಒತ್ತು ನೀಡಿತ್ತಿದ್ದರೂ ಇಲಿಕಾಟ ತಪ್ಪಿಲ್ಲ. ಆದರೆ ಇದಕ್ಕಿಂತಲೂ ಅಚ್ಚರಿಯ ವಿಚಾರವೆಂದರೆ, ಭಾರತೀಯ ರೈಲ್ವೆಯ ಚೆನ್ನೈ ವಿಭಾಗವು ಒಂದೇ ಒಂದು ಇಲಿಯನ್ನು ಹಿಡಿಯಲೆಂದು ಅಂದಾಜು 22,300 ರೂಗಳನ್ನು ಖರ್ಚು ಮಾಡಿದೆಯಂತೆ..! ಅಚ್ಚರಿಯದ್ರೂ ಇದು ಸತ್ಯ.
ಜುಲೈ 17 ರಂದು ಸಲ್ಲಿಸಿದ ಆರ್ಟಿಐಗೆ ಪ್ರತಿಕ್ರಿಯಿಸಿದ ಚೆನ್ನೈ ವಿಭಾಗ ಕಚೇರಿ ನೀಡಿದ ವರದಿಯಂತೆ, ಒಂದು ಇಲಿಯನ್ನು ಬಲೆಗೆ ಬೀಳಿಸಲು ಅಂದಾಜು 22,300 ರೂಗಳನ್ನು ಖರ್ಚು ಮಾಡಿದೆ ಎಂದು ಬಹಿರಂಗಪಡಿಸಿದೆ.
ಇಲಿಗಳು ರೈಲು ನಿಲ್ದಾಣ ಹಾಗೂ ಬೋಗಿಗಳಲ್ಲಿ ಸಾಕಷ್ಟು ಹಾಳುಗೆಡವುತ್ತಿದೆ. ನಮ್ಮ ತಂಡ ಇಲಿಗಳನ್ನು ಹಿಡಿಯಲು ಶ್ರಮಿಸುತ್ತಿದೆ ಇದಕ್ಕಾಗಿ 5.89 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ವರದಿ ತಿಳಿಸಿದೆ
2018-19ನೇ ಸಾಲಿನಲ್ಲಿ ಒಟ್ಟು 2636 ಇಲಿಗಳು ಇಲಾಖೆಯ ಬೋನಿಗೆ ಸಿಕ್ಕಿಬಿದ್ದಿವೆ. 1,715 ಇಲಿಗಳನ್ನು ಚೆನ್ನೈ ಸೆಂಟ್ರಲ್, ಎಗ್ಮೋರ್, ಚೆಂಗಲ್ಪಟ್ಟು ಹಾಗೂ ತಾಂಬರಮ್ ನಲ್ಲಿ ಹಿಡಿಯಲಾಗಿದ್ರೆ, ರೈಲ್ವೆ ಕೋಚಿಂಗ್ ಸೆಂಟರ್ ನಲ್ಲಿ 921 ಇಲಿಗಳನ್ನು ಹಿಡಿಯಲಾಗಿದೆಯಂತೆ . ಈ ಎಲ್ಲಾ ಇಲಿಗಳನ್ನು ಹಿಡಿಯಲೆಂದು ಚೆನ್ನೈ ರೈಲ್ವೆ ವಿಭಾಗ 5.89 ಕೋಟಿ ರೂ. ಖರ್ಚು ಮಾಡಿದೆಯಂತೆ . ಹೀಗಾಗಿ ತಲಾ ಒಂದು ಇಲಿ ಹಿಡಿಯಲು 22,300 ರೂಗಳನ್ನು ಖರ್ಚು ಆಗಿದೆ ಆರ್ಟಿಐ ಬಹಿರಂಗಪಡಿಸಿದೆ.