ನವದೆಹಲಿ, ಅ.11(Daijiworld News/SS): ರೈತರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಆರ್ಥಿಕತೆಯು ಅಸ್ತವ್ಯಸ್ತವಾಗಿದೆ. ಜನರನ್ನು ತಮ್ಮ ಉದ್ಯೋಗದಿಂದ ವಜಾ ಮಾಡಲಾಗುತ್ತಿದೆ. ಪಿಎಮ್ಸಿ ಬ್ಯಾಂಕ್ಗೆ ಸಂಬಂಧಿಸಿದ ಜನರು ಅಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಮ್ಸಿ) ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರ 76,000 ಕೋಟಿ ರೂ.ಗಳ ಸಾಲವನ್ನು ಯಾರಿಗೆ ಮನ್ನಾ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲ, ಪಿಎಮ್ಸಿ ಬ್ಯಾಂಕಿನೊಂದಿಗೆ ಖಾತೆದಾರರು ಸಂಕಷ್ಟದಲ್ಲಿದ್ದಾರೆ ಮತ್ತು ಸಹಾಯಕ್ಕಾಗಿ ಕೋರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಎಸ್ಬಿಐ 76000 ಕೋಟಿ ರೂ.ಗಳ ಅನುತ್ಪಾದಕ ಸಾಲವನ್ನು ಹೊಂದಿದ್ದು, ಸುಮಾರು 220 ಜನ ಈಗ ಅದನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದಿದೆ. ಈ ಅಂಶ ಆರ್ಟಿಐ ಮೂಲಕ ಬೆಳಕಿಗೆ ಬಂದಿದೆ. 76000 ಕೋಟಿ ರೂ.ಗಳ ಸಾಲವನ್ನು ಸರ್ಕಾರ ಯಾರಿಗೆ ಮನ್ನಾ ಮಾಡುತ್ತಿದೆ ಎಂದು ಸುದ್ದಿ ವರದಿಯನ್ನು ಉಲ್ಲೇಖಿಸಿದ ಅವರು, ಬಡ ರೈತರು, ಪಿಎಮ್ಸಿ ಬ್ಯಾಂಕ್ಗೆ ಸಂಬಂಧಿಸಿದ ಜನರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.