ನವದೆಹಲಿ, ಅ 11 (Daijiworld News/MSP): ಸೌದಿ ಅರೇಬಿಯಾದ ಕರಾವಳಿಯಲ್ಲಿ ಶುಕ್ರವಾರ ಇರಾನ್ ನ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ದಾಳಿಯಿಂದ ರಾಷ್ಟ್ರೀಯ ಇರಾನೀಯನ್ ತೈಲ ಕಂಪನಿ ಮಾಲಕತ್ವದ ಈ ಟ್ಯಾಂಕರ್ ಗೆ ಹಾನಿಯಾಗಿದ್ದು, ರೆಡ್ ಸಮುದ್ರದ 60 ಕಿಮೀ ದೂರದಲ್ಲಿ ತೈಲ ಸೋರಿಕೆಯಾಗುತ್ತಿದೆ. ಸ್ಫೋಟ ಸಂಭವಿಸಿದಾಗ ಈ ಹಡಗು ಜೆಡ್ಡಾದಿಂದ 97 ಕಿಮೀ ದೂರದಲ್ಲಿತ್ತು ಎಂದು ತಿಳಿದುಬಂದಿದೆ.
ಈ ಕ್ಷಿಪಣಿ ದಾಳಿಯು ಭಯೋತ್ಪಾದಕ ದಾಳಿಯಿರಬಹುದು ಎಂದು ಹೇಳಲಾಗುತ್ತಿದ್ದು, ರೆಡ್ ಸೀ ಮತ್ತು ಗಲ್ಫ್ ವ್ಯಾಪ್ತಿಯಲ್ಲಿ ಸಂಚರಿಸುವ ತೈಲ ಟ್ಯಾಂಕರ್ ಗಳನ್ನು ಗುರಿಯಾಗಿರಿಸಿಕೊಂಡು ನಡೆದಿದೆ ಎಂದು ಹೇಳಲಾಗುತ್ತಿದೆ. ಸೆ.14 ರಂದೂ ಕೂಡ ಸೌದಿ ಅರೇಬಿಯಾದ ಎರಡು ತೈಲ ಸಂಗ್ರಹ ಮೇಲೆ ದಾಳಿ ನಡೆಸಲಾಗಿತ್ತು. ಈ ಘಟನೆ ಬಳಿಕ ಇರಾನ್ ಹಾಗೂ ಸೌದಿ ಅರೇಬಿಯಾದ ನಡುವಿನ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ
ಈ ಘಟನೆಯ ಬೆನ್ನಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಧೀಡಿರ್ ಹೆಚ್ಚಳವಾಗಿದೆ. 58 ಡಾಲರ್ ಇದ್ದ ಕಚ್ಚಾ ತೈಲದ ಬೆಲೆ 60 ಡಾಲರ್ ಗೆ ತಲುಪಿದೆ. ಸೌದಿ ಹಾಗೂ ಇರಾನ್ ಶೀತಲ ಸಮರದಿಂದ ಕಚ್ಚಾ ತೈಲದ ಬೆಲೆ ಬ್ಯಾರಲ್ ಗೆ ಇನ್ನೂ 5-6 ಡಾಲರ್ ಹೆಚ್ಚಳವಾಗಬಹುದು ಎನ್ನುವುದು ತಜ್ಞರ ಲೆಕ್ಕಚಾರವಾಗಿದೆ. ಇದರ ನೇರ ಪರಿಣಾಮ ಭಾರತದ ಮೇಲಾಗಲಿದೆ. ಯಾಕಂದ್ರೆ ಭಾರತ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 2 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ.