ಕೋಲ್ಕತ್ತಾ, ಅ 11 (Daijiworld News/MSP): ಈ ವರ್ಷದ ಆರಂಭದಲ್ಲಿ ನಿಖಿಲ್ ಜೈನ್ ಅವರನ್ನು ವಿವಾಹವಾದ ನಟಿ , ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಅವರು ಆಗಿನಿಂದಲೂ ಸದಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ತಾನೆ ದುರ್ಗಾ ಪೂಜೆಯಲ್ಲಿ ಭಾಗವಹಿಸಿ ಮುಸ್ಲಿಂ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದ ನುಸ್ರತ್ ಇದೀಗ ಮತ್ತೆ ಟೀಕೆಗೆ ಗುರಿಯಾಗಿದ್ದಾರೆ.
ಶುಕ್ರವಾರ ಕೋಲ್ಕತ್ತಾದಲ್ಲಿ ಚಲ್ತಾ ಬಗಾನ್ ದುರ್ಗಾ ಪೂಜಾ ಪಂಡಾಲ್ನಲ್ಲಿ ನಡೆದ ಸಿಂಧೂರ್ ಖೇಲ್ ಕಾರ್ಯಕ್ರಮದಲ್ಲಿ ಪತಿ ನಿಖಿಲ್ ಜೈನ್ ಜತೆಗೆ ನುಸ್ರತ್ ಭಾಗವಹಿಸಿದ್ದರು. ಇದರಿಂದ ಮುಸ್ಲಿಂ ಮುಖಂಡರ ಕಣ್ಣು ಕೆಂಪಾಗಿಸಿತ್ತು. ಮಾತ್ರವಲ್ಲದೆ ನುಸ್ರತ್ರನ್ನು ಮುಸ್ಲಿಂ ವಿರೋಧಿ ಎಂದು ಟೀಕಿಸಿದ್ದಾರೆ
ಆದರೆ ಈ ಆರೋಪದ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿರುವ ನುಸ್ರತ್, ದೇವರ ಮಗಳಾಗಿರುವ ನಾನು ಯಾವುದೇ ಮುಜುಗರವಿಲ್ಲದೆ ಎಲ್ಲಾ ಹಬ್ಬಗಳನ್ನು ಆಚರಿಸುತ್ತೇನೆ. ಮಾನವೀಯತೆಯನ್ನು ಗೌರವಿಸುವ ನಾನು ವಿವಾದಗಳಿಗೆ ಕೇರ್ ಮಾಡಲ್ಲಿ. ನಾನು ಖುಷಿಯಾಗೇ ಇದ್ದೇನೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಅಕ್ಟೋಬರ್ 7ರಂದು ದುರ್ಗಾ ಪೂಜೆ ನೆರವೇರಿಸಿದ್ದ ನುಸ್ರತ್ ಜಹಾನ್ಗೆ ಮುಸ್ಲಿಂ ವಿರೋಧಿ ಪಟ್ಟ ಕಟ್ಟಲಾಗಿತ್ತು.