ಮಹಾಬಲಿಪುರಂ, ಅ 12 (Daijiworld News/MSP): ಐತಿಹಾಸಿಕ ನಗರಿ ಮಹಾಬಲಿಪುರಂನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಹತ್ವದ ಭೇಟಿ ಶುಕ್ರವಾರ ತಮಿಳುನಾಡಿನ ಮಹಾಬಲಿಪುರಂ ಸಾಕ್ಷಿಯಾಯಿತು.
ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಪು ಧೋತಿ, ಬಿಳಿ ಅಂಗಿ ಧರಿಸಿ ಶಲ್ಯ ಹೊದ್ದುಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಚೀನಾ ಅಧ್ಯಕ್ಷರನ್ನು ಬರಮಾಡಿಕೊಂಡ ಬಳಿಕ ಮಹಾಬಲಿಪುರಂ ದೇವಾಲಯಗಳ ಶಿಲ್ಪಕಲಾ ವೈಭವವನ್ನು ದರ್ಶನ ಮಾಡಿಸಿದ್ದರು.
ಇದರ ಬೆನ್ನಲ್ಲೇ ಮೋದಿ ಅವರ ಸರಳತೆ ಹಾಗೂ ಸ್ವಚ್ಚತೆಯ ಬಗ್ಗೆ ಇರುವ ಕಾಳಜಿ ಕಂಡು ನೆಟ್ಟಿಗರು ಕೊಂಡಾಡಿದ್ದಾರೆ. ಮಹಾಬಲಿಪುರಂ ಬೀಚ್ ನಲ್ಲಿ ಬರಿಗಾಲಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಬೆಳ್ಳಂ ಬೆಳಗ್ಗೆ ಬೀಚ್ನಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ಪ್ರವಾಸಿಗರು ಎಸೆದು ಹೋದ ಹಾಗೂ ಸಮುದ್ರ ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಮತ್ತು ಬಾಟಲಿಗಳನ್ನು ಹೆಕ್ಕಿ ತೆಗೆದಿದ್ದಾರೆ.
ಅವರೇ ಸ್ವಚ್ಚ ಭಾರತ ಅಭಿಯಾನದಲ್ಲಿ ಪಾಲುದಾರರಾಗಿ ವಿಡಿಯೋವನ್ನು ಟ್ವೀಟ್ ಮಾಡಿರುವ ಪಿಎಂ ಮೋದಿ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚ ಮತ್ತು ಅಚ್ಚುಕಟ್ಟಾಗಿರಿಸುವಂತೆ ಸೂಚನೆ ನೀಡಿದ್ದಾರೆ . ಅದರ ಜೊತೆಗೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದ್ದಾರೆ.ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.