ಪಶ್ಚಿಮ ಬಂಗಾಳ, ಅ 13 Daijiworld News/MSP): ಇಬ್ಬರು ದುಷ್ಕರ್ಮಿಗಳು ಬಿಜೆಪಿ ಮುಖಂಡನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ.
ಕೊಲೆಯಾದ ಮುಖಂಡನನ್ನು ಹರಲಾ ದೇಬ್ ನಾಥ್ (55)ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ಬಿಜೆಪಿ ಮುಖಂಡನಾಗಿದ್ದ. ಅಂಗಡಿಯೊಂದನ್ನು ಹೊಂದಿದ್ದ ಈತ ವ್ಯಾಪಾರದಲ್ಲಿ ನಿರತನಾಗಿದ್ದಾಗ ರಾತ್ರಿ 10 ಗಂಟೆಯ ವೇಳೆ ವ್ಯಾಪಾರದ ನೆಪದಲ್ಲಿ ಒಳನುಗ್ಗಿದ್ದ ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ. ಈ ಘಟನೆ ಮೃತನ ಪತ್ನಿ ಎದುರಲ್ಲೇ ನಡೆದಿದ್ದೂ, ದೇಬ್ ನಾಥ್ ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕಿಸಲಾಗಲಿಲ್ಲ.
ಪಶ್ಚಿಮ ಬಂಗಾಳದಲ್ಲಿ ಈ ಘಟನೆ ತಲ್ಲಣ ಸೃಷ್ಟಿಸಿದೆ. ಈ ಕೃತ್ಯದ ಹಿಂದೆ ತೃಣಮೂಲ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಡಿಯಾ ಆರೋಪಿಸಿದ್ದಾರೆ.