ನವದೆಹಲಿ, ಅ 13 (Daijiworld News/MSP): ವೈಟ್ ಅಂಡ್ ವೈಟ್ ಲುಂಗಿಯಲ್ಲಿ ಶುಕ್ರವಾರ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜತೆ ಮಿಂಚಿದ್ದ ಪ್ರಧಾನಿ ಮೋದಿ ಶನಿವಾರ ಬೆಳ್ಳಂಬೆಳಗ್ಗೆ ಮಹಾಬಲಿಪುರಂ ಕಡಲ ಕಿನಾರೆಯಲ್ಲಿ ವಾಯುವಿಹಾರ ನಡೆಸಿದ್ದರು.
ವಾಯುವಿಹಾರದೊಂದಿಗೆ ಬೀಚ್ ನಲ್ಲಿ ಎಸೆದಿದ್ದ ಪಾಸ್ಟಿಕ್ ಕವರ್ , ಬಾಟಲ್ ಗಳನ್ನು ಬರಿಗಾಲಲ್ಲಿ ಹೆಕ್ಕಿ ತೆಗೆದಿದ್ದರು. ಮೋದಿ ಸುಮಾರು ಅರ್ಧ ಗಂಟೆ ಕಾಲ ಸಮುದ್ರ ತೀರದಲ್ಲಿ ಪ್ಲಾಗಿಂಗ್ ಅಂದ್ರೆ ವಾಕ್ ಮಾಡುತ್ತಾ ಅಥವಾ ಜಾಗಿಂಗ್ ಮಾಡುತ್ತಾ ಕಸವನ್ನ ಹೆಕ್ಕಿ ಸ್ವಚ್ಛತೆಯ ಸಂದೇಶ ಸಾರಿದ್ರು.
ಈ ಸಂದರ್ಭ ಈ ವೇಳೆ ಅವರ ಕೈಯಲ್ಲಿದ್ದ ಟಾರ್ಚ್ ನಂತಹ ವಸ್ತುವೊಂದು ಜನರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಇದಕ್ಕೆ ಸ್ವತಃ ಮೋದಿಯೇ ಉತ್ತರ ನೀಡಿದ್ದಾರೆ.
ಪ್ಲಾಗಿಂಗ್ ಮಾಡುವಾಗ ನನ್ನ ಕೈಯಲ್ಲಿ ಇದ್ದಿದ್ದು ಏನೆಂದು ಬಹಳಷ್ಟು ಜನ ನನ್ನ ಪ್ರಶ್ನಿಸಿದ್ದರು. ನನ್ನ ಕೈಯಲ್ಲಿದ್ದದ್ದು ಆ್ಯಕ್ಯೂಪ್ರೆಶರ್ ರೋಲರ್. ನಾನು ಆಗಾಗ ಅದನ್ನು ಬಳಸುತ್ತೇನೆ. ಇದರಿಂದ ನನಗೆ ತುಂಬಾ ಉಪಯೋಗವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.