ನವದೆಹಲಿ, ಅ 13 (Daijiworld News/MSP): ಬ್ಯಾಂಕ್ ಗ್ರಾಹಕರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಭ ಸಮಾಚಾರವೊಂದನ್ನು ನೀಡಿದೆ. ಇನ್ನು ಮುಂದೆ ಎಟಿಎಂನಲ್ಲಿ ವಹಿವಾಟು ಮಾಡುವ ವೇಳೆ ಅದು ವಿಫಲಗೊಂಡು ನಿಮ್ಮ ಖಾತೆಯಿಂದ ಹಣ ಕಡಿತವಾದರೆ ಅದನ್ನು ನಿರ್ದಿಷ್ಟ ಅವಧಿಯೊಳಗೆ ಬ್ಯಾಂಕುಗಳು ಮರಳಿಸಬೇಕಾಗುತ್ತದೆ.
ನೀವು ಎಟಿಎಂಗೆ ಹೋಗಿ ಹಣ ತೆಗೆಯಲೆಂದು ಹೋದಾಗ ಬೇಕಾದ ಮೊತ್ತ, ಪಿನ್ ಎಲ್ಲವನ್ನೂ ಸರಿಯಾಗಿಯೇ ಎಂಟ್ರಿ ಮಾಡಿದಾಗ ಕೊನೆಯಲ್ಲಿ ಹಣ ಸ್ವೀಕರಿಸುವಂತೆ ಮೇಸೆಜ್ ಬರುತ್ತದೆ. ಆದರೆ, ಹಣ ಮಾತ್ರ ಬರುವುದಿಲ್ಲ. ಇನ್ನೊಂದೆಡೆ ನೀವು ಕ್ಯಾಶ್ ಡ್ರಾ ಮಾಡಿರುವುದಾಗಿ ಮೊಬೈಲ್ಗೆ ಎಸ್ಎಂಎಸ್ ಸಹ ಬರುತ್ತದೆ! ಇನ್ನೊಂದೆಡೆ ನಿಮ್ಮ ಖಾತೆಯಲ್ಲಿನ ಅಕೌಂಟ್ ನಲ್ಲಿದ್ದ ಹಣ ಕಡಿತವಾಗಿರುತ್ತದೆ ಆದರೆ ದುಡ್ಡು ಮಾತ್ರ ನಿಮ್ಮ ಕೈಗೆ ಬಂದಿರುವುದಿಲ್ಲ. ಈ ರೀತಿ ನಡೆದಾಗ ಬ್ಯಾಂಕ್ಗಳು ಗ್ರಾಹಕರಿಗೆ 5 ದಿನಗಳ ಒಳಗೆ ಆ ಮೊತ್ತವನ್ನು ಮರಳಿಸಬೇಕು. ಈ ಅವಧಿಯನ್ನು ಮೀರಿದ ವೇಳೆ ಪ್ರತಿದಿನಕ್ಕೆ ಬ್ಯಾಂಕುಗಳು ನೂರು ರೂಪಾಯಿಯಂತೆ ದಂಡ ಸೇರಿಸಿ ಹಣ ನೀಡಬೇಕಾಗುತ್ತದೆ.
ಎಟಿಎಂ ವಹಿವಾಟು ವೇಳೆ ಆಗುತ್ತಿರುವ ಪ್ರಮಾದಗಳ ಕುರಿತು ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ನಿರ್ಧಾರ ಕೈಗೊಂಡಿದ್ದು, ಬ್ಯಾಂಕುಗಳು ವಿಫಲಗೊಂಡ ವಹಿವಾಟಿನ ಹಣವನ್ನು ಗ್ರಾಹಕರಿಗೆ ಮರಳಿಸಬೇಕಾಗುತ್ತದೆ. ಇಲ್ಲವಾದರೆ ಪ್ರತಿ ದಿನಕ್ಕೆ ನೂರು ರೂಪಾಯಿ ನಂತೆ ಗ್ರಾಹಕರಿಗೆ ಪರಿಹಾರ ನೀಡಬೇಕೆಂದು ಆರ್.ಬಿ.ಐ. ಸೂಚನೆ ನೀಡಿದೆ. ಎಟಿಎಂ ವಹಿವಾಟು ವಿಫಲವಾದ್ರೆ ೫ ದಿನ, ಡೆಬಿಟ್ ಕಾರ್ಡ್ ನಲ್ಲಿ ಸಮಸ್ಯೆಯಾದ್ರೆ, ಒಂದೇ ದಿನ, ಐಪಿಎಂಎಸ್ ವ್ಯವಹಾರಕ್ಕೆ ಒಂದೇ ದಿನದಲ್ಲಿ ಬ್ಯಾಂಕ್ ಹಣ ಮರುಪಾವತಿಸಬೇಕು.
ಈ ನೀತಿಯೂ ಯುಪಿಐ ಖಾತೆ, ಆಧಾರ್ ಪೇ ಸೇರಿದಂತೆ ಇತರ ಖಾತೆಗಳಿಗೂ ಆರ್ ಬಿಐ ನ ಗ್ರಾಹಕ ಪರಿಹಾರ ನೀತಿ ನಿಯಮ ಅನ್ವಯವಾಗುತ್ತದೆ.