ಚಾಮರಾಜನಗರ, ಅ 13 (DaijiworldNews/SM): ಕೊನೆಗೂ ನರ ಹಂತಕ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಐದು ದಿನಗಳ ನಿರಂತರ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳಿಗೆ ಸೋಲಿಗರ ಸಹಾಯದಿಂದ ಹುಲಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಹುಲಿಗೆ ಅರವಳಿಕೆ ಮದ್ದು ಚುಚ್ಚಿ ಜೀವಂತವಾಗಿ ಹುಲಿಯನ್ನು ಸೆರೆ ಹಿಡಿಯಲಾಗಿದೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಿಂಜಿನ ಗ್ರಾಮಸ್ಥರಲ್ಲಿ ಈ ನರಹಂತಕ ಹುಲಿ ಆತಂಕವನ್ನು ಹುಟ್ಟಿಸಿತ್ತು. ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದರು. ಹೀಗಾಗಿ ತಕ್ಷಣವೇ ಸಾಕಾಣೆಗಳ ತಂಡಗಳ ಸಹಾಯದಿಂದ ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ.
ಹುಲಿಯ ಇರುವಿಕೆಯನ್ನು ಪತ್ತೆ ಹಚ್ಚಿದ ನಂತರ ಪ್ರದೇಶವನ್ನು ಸುತ್ತುವರೆದ ಅರಣ್ಯಾಧಿಕಾರಿಗಳು ಮತ್ತು ವೈದ್ಯರು ಹುಲಿಗೆ ಅರವಳಿಕೆ ಚುಚ್ಚು ಮದ್ದು ಹೊಡೆದಿದ್ದಾರೆ. ಬಳಿಕ ನಿರಂತರ ಪ್ರಯತ್ನದಿಂದ ಹುಲಿಯನ್ನು ಬೋನಿನಲ್ಲಿ ಜೀವಂತವಾಗಿ ಸೆರೆಹಿಡಿಯಲಾಗಿದೆ.