ಮುಂಬೈ, ಅ 13 (DaijiworldNews/SM): ದೇಶದಲ್ಲಿ ಪ್ರಸ್ತುತ ನೂರಾರು ಸಮಸ್ಯೆಗಳಿಗೆ. ಪ್ರಮುಖವಾಗಿ ಆರ್ಥಿಕ ಕುಸಿತ, ನಿರುದ್ಯೋಗ, ರೈತರ ಸಾಲ ಸೇರಿದಂತೆ ಹತ್ತಾರು ಸಮಸ್ಯೆಗೈರುವ ಸಂದರ್ಭದಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರಕಾರ ಹಲವಾರು ಕುತಂತ್ರಗಳನ್ನು ನಡೆಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದಾರೆ.
ಅನೇಕ ಮಂದಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ರೈತರು ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ. ಮತ್ತೊಂದೆಡೆ ನೆರೆ ಅವರಿಸಿ ಸಂಕಷ್ಟ ಎದುರಾಗಿದೆ. ಆದರೆ, ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ರೈತರ ಸಾಲ ಮನ್ನಾ ಮಾಡಿಲ್ಲ. ಅಚ್ಚೇ ದಿನ್ ಯಾವಾಗ ಬರುತ್ತದೆ ಎಂದು ರಾಹುಲ್ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ.
ಇನ್ನು ಇತ್ತೀಚಿಗಿನ ಚಂದ್ರಯಾನ-2 ಯೋಜನೆಯ ಬಗ್ಗೆ ಉಲ್ಲೇಖಿಸಿದ ರಾಹುಲ್ ಗಾಂಧಿ, ಯುವಕರು ಉದ್ಯೋಗ ಕೇಳುತ್ತಿರುವಾಗ, ಸರ್ಕಾರ ಚಂದ್ರನನ್ನು ನೋಡುವಂತೆ ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ಕೇಂದ್ರ ಸರಕಾರವಾಗಲಿಯಾವುದೇ ಕಾರ್ಯವನ್ನು ಮಾಧ್ಯಮಗಳು ಪ್ರಶ್ನಿಸುತ್ತಿಲ್ಲ. ಯಾಕೆಂದರೆ, ಮಾಧ್ಯಮಗಳು ಪ್ರಮುಖ ಉದ್ಯಮಿಗಳಾ ಕೈಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.