ಕಾಶ್ಮೀರ, ಅ.15(Daijiworld News/SS): ಸಂವಿಧಾನದ 370ನೇ ವಿಧಿ ರದ್ಧತಿ ನಂತರ 72 ದಿನಗಳ ಕಾಲ ಸಂವಹಾನ ಜಾಲ ಸ್ಥಗಿತಗೊಂಡಿದ್ದ ಕಾಶ್ಮೀರದಲ್ಲಿ ಪೋಸ್ಟ್ ಪೇಯ್ಡ್ ಮೊಬೈಲ್ ಪೋನ್'ಗಳ ಸೇವೆಯನ್ನು ಪುನರ್ ಆರಂಭಿಸಿದ ನಂತರ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.
ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಶೋಪಿಯನ್ ಜಿಲ್ಲೆಯಲ್ಲಿ ಸೇಬುಗಳನ್ನು ಸಾಗಿಸಲಾಗುತ್ತಿದ್ದ ಟ್ರಕ್ ಡ್ರೈವರ್'ನನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಉಗ್ರರು ಪಾಕಿಸ್ತಾನದವರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಶಿರ್ಮಾಲ್ ಹಳ್ಳಿಯಲ್ಲಿ ಉಗ್ರರು ಈ ದಾಳಿ ನಡೆಸಿದ್ದು, ಮೃತನನ್ನು ಶರೀಫ್ ಖಾನ್ ಎಂದು ಗುರುತಿಸಲಾಗಿದೆ. ಉಗ್ರರು ಶರೀಫ್ ಖಾನ್ ನನ್ನು ಹತ್ಯೆಗೈದಿದ್ದರೆ ಸೇಬು ತೋಟದ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ ಎನ್ನಲಾಗಿದೆ. ರಾಜಸ್ತಾನ ನೋಂದಣಿಯ ಟ್ರಕ್'ಗೆ ಜಮ್ಮುವಿನಲ್ಲಿ ಬೆಂಕಿ ಹಚ್ಚಲಾಗಿದೆ. ಮೃತದೇಹವನ್ನು ಟ್ರಕ್'ನಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.