ಥಾಣೆ, ಅ.15(Daijiworld News/SS): ರಫೆಲ್ ಯುದ್ಧ ವಿಮಾನವನ್ನು ಭಾರತ ಖರೀದಿಸಿದ್ದು ಆತ್ಮ ರಕ್ಷಣೆಗೆ ಹೊರತು ಬೇರೆ ದೇಶಗಳ ಮೇಲೆ ಜಿದ್ದಿನಿಂದಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರು.
ರಫೆಲ್ ಯುದ್ಧ ವಿಮಾನ ಮೊದಲೇ ಭಾರತೀಯ ವಾಯುಪಡೆಯಲ್ಲಿ ಇರುತ್ತಿದ್ದರೆ ಪಾಕಿಸ್ತಾನದ ಬಾಲಾಕೋಟ್'ನಲ್ಲಿ ಉಗ್ರರ ಶಿಬಿರ ತಾಣವನ್ನು ಪ್ರವೇಶಿಸಿ ದಾಳಿ ಮಾಡುವ ಅಗತ್ಯವಿರಲಿಲ್ಲ ಎಂದು ಹೇಳಿದರು.
ಭಾರತೀಯ ವಾಯುಪಡೆಯಲ್ಲಿ ಮೊದಲೇ ರಫೆಲ್ ಯುದ್ಧ ವಿಮಾನವಿರುತ್ತಿದ್ದರೆ ಬಲಾಕೋಟ್ ನೊಳಗೆ ಪ್ರವೇಶಿಸಿ ವಾಯುದಾಳಿ ನಡೆಸುವ ಅಗತ್ಯವಿರಲಿಲ್ಲ. ಭಾರತದೊಳಗೆ ಕುಳಿತಲ್ಲಿಂದಲೇ ಬಾಲಾಕೋಟ್ ಮೇಲೆ ದಾಳಿ ನಡೆಸಿ ಉಗ್ರರ ತಾಣವನ್ನು ಹೊಡೆದುರುಳಿಸಬಹುದಾಗಿತ್ತು ಎಂದು ತಿಳಿಸಿದರು.
ಇದೇ ವೇಳೆ ಅವರು, ಫ್ರಾನ್ಸ್'ನಲ್ಲಿ ಇತ್ತೀಚೆಗೆ ರಫೆಲ್ ಯುದ್ಧ ವಿಮಾನವನ್ನು ಬರಮಾಡಿಕೊಳ್ಳುವಾಗ ಆಯುಧ ಪೂಜೆಯ ಶಾಸ್ತ್ರಗಳನ್ನು ನೆರವೇರಿಸಿದ್ದನ್ನು ಸಮರ್ಥಿಸಿಕೊಂಡರು.