ಶ್ರೀನಗರ, ಅ.16(Daijiworld News/SS): ಭಾರತೀಯ ಸೇನಾ ಪಡೆ ಮತ್ತು ಭಯೋತ್ಪಾದಕರ ನಡುವೆ ದಕ್ಷಿಣ ಕಾಶ್ಮಿರದ ಪಾಜಲ್ ಪುರ್ ಪ್ರದೇಶದಲ್ಲಿ ಭಾರೀ ಗುಂಡಿನ ಕಾಳಗ ನಡೆದಿದೆ.
ಈ ವೇಳೆ ಸೇನೆಯ ಎನ್ ಕೌಂಟರ್'ಗೆ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮೂವರು ಉಗ್ರರು ಬಲಿಯಾಗಿರುವುದಾಗಿ ವರದಿ ತಿಳಿಸಿದೆ. ಜಮ್ಮು-ಕಾಶ್ಮೀರದ ಹೊರವಲಯದ ಅನಂತ್ ನಾಗ್'ನಲ್ಲಿರುವ ಪಾಜಲ್ ಪುರ್'ನ ಮನೆಯೊಂದರಲ್ಲಿ ಮೂವರು ಉಗ್ರರು ಅಡಗಿದ್ದು, ಈ ಮಾಹಿತಿ ಪಡೆದು ಭದ್ರತಾ ಪಡೆ ಕೂಂಬಿಂಗ್ ಕಾರ್ಯಾಚರಣೆಗೆ ಇಳಿದಿತ್ತು.
ಭಾರತೀಯ ಸೇನಾಪಡೆ ಮತ್ತು ಸಿಆರ್ ಪಿಎಫ್ ಯೋಧರು ಜಂಟಿಯಾಗಿ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದರು. ಈ ಸಂದರ್ಭದಲ್ಲಿ ಉಗ್ರರು ಯೋಧರತ್ತ ಗುಂಡಿನ ದಾಳಿ ನಡೆಸಲು ಆರಂಭಿಸಿದಾಗ, ಭಾರತೀಯ ಸೇನಾ ಪಡೆ ಪ್ರತಿ ದಾಳಿ ಮುಂದುವರಿಸಿದೆ ಎಂದು ತಿಳಿದುಬಂದಿದೆ.
ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.