ಅಕೊಲಾ, ಅ.16(Daijiworld News/SS): ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ಧತಿ ವಿಚಾರದಲ್ಲಿ ಪ್ರತಿಪಕ್ಷಗಳ ನಡೆದುಕೊಳ್ಳುತ್ತಿರುವ ರೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.
ಆರ್ಟಿಕಲ್ 370 ರದ್ದು ಮಾಡಿರುವುದಕ್ಕೂ ಮಹಾರಾಷ್ಟ್ರ ಚುನಾವಣೆಗೂ ಸಂಬಂಧವಿಲ್ಲ. ಜಮ್ಮು ಕಾಶ್ಮೀರಕ್ಕೂ ಮಹಾರಾಷ್ಟ್ರಕ್ಕೂ ಸಂಬಂಧವಿಲ್ಲ ಎಂದು ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಮುಕ್ತವಾಗಿಯೇ ಹೇಳುತ್ತಿದ್ದಾರೆ. ಅಂಥವರಿಗೆ ನಾನು ಹೇಳಬಯಸುವುದೇನೆಂದರೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಅಲ್ಲಿನ ಜನರು ಕೂಡ ಭಾರತ ಮಾತೆಯ ಮಕ್ಕಳೆಂದು ಹೇಳಿ, ಆರ್ಟಿಕಲ್ 370, ಮಹಾರಾಷ್ಟ್ರ ಚುನಾವಣೆಗೆ ಹೇಗೆ ಸಂಬಂಧಿಸುತ್ತದೆ ಎಂದು ಕೇಳಲು ಅವರಿಗೆಷ್ಟು ಧೈರ್ಯ ಎಂದು ಪ್ರಶ್ನಿಸಿದರು.
ಇದೇ ವೇಳೆ ರಾಷ್ಟ್ರ ನಿರ್ಮಾಣಕ್ಕೆ ಹಿಂದುತ್ವ ಆದರ್ಶವಾದಿ ವಿನಾಯಕ್ ದಾಮೋದರ್ ಸಾವರ್ಕರ್ ಮೌಲ್ಯಗಳೇ ಅಡಿಪಾಯ. ರಾಷ್ಟ್ರೀಯತೆಯ ಅಡಿಪಾಯದಲ್ಲಿ ರಾಷ್ಟ್ರ ನಿರ್ಮಾಣವಾಗುತ್ತಿರುವುದಕ್ಕೆ ಸಾವರ್ಕರ್ ಮೌಲ್ಯಗಳೇ ಕಾರಣ ಎಂದು ಬಣ್ಣಿಸಿದರು.