ನವದೆಹಲಿ, ಅ 16 (Daijiworld News/MSP): ಬರೇಲಿಯ 80 ವರ್ಷದ "ದೇಸಿ ಎಂಜಿನಿಯರ್" ಒಬ್ಬರ ಚಮತ್ಕಾರದಿಂದ ದ್ವನಿ ಅಜ್ಞೆಯ ಮೂಲಕ ಈ ಮೋಟರ್ ಬೈಕ್ ನಲ್ಲಿ ಹಾಡುಗಳನ್ನು ಆಸ್ವಾದಿಸಬಹುದು, ಹಣವನ್ನು ಕೂಡಾ ವಿತರಿಸಬಲ್ಲದು.
ಹೌದು , ಬಹಳಷ್ಟು ಮಂದಿ ಸೃಜನಾತ್ಮಕವಾಗಿ ಯೋಚಿಸಿ , ತಮ್ಮದೇ ಜ್ಞಾನ ಬಳಸಿ ಅದ್ಭುತ ಆವಿಷ್ಕಾರಗಳನ್ನು ಮಾಡುತ್ತಾರೆ. ಅಂಥವರ ಸಾಲಿನಲ್ಲಿ ಚಾಚಾ ಮೊಹಮ್ಮದ್ ಸೈಯದ್ ಕೂಡಾ ಸೇರುತ್ತಾರೆ. ಇವರು ಕಂಡು ಹಿಡಿದ ದ್ವನಿ ಅಜ್ಞೆಯ ಬೈಕಿಗೆ ಇದೀಗ ನೆಟ್ಟಿಗರು ಫಿದಾ ಆಗಿದ್ದಾರೆ.
ಸೈಯದ್ ಚಾಚಾ ಈ ಆವಿಷ್ಕಾರವೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕೆಲವರು ಇದನ್ನು ಪ್ರೋತ್ಸಾಹಿಸಿದ್ದ್ರೆ ಇನ್ನು ಕೆಲವರು ಇದು "ನಕಲಿ, ಉತ್ತಮವಾಗಿ ಪ್ರದರ್ಶಿಸಲಾದ ಒಂದು ಟ್ರಿಕ್ " ಎಂದು ಹೇಳಿದ್ದಾರೆ.
ಈ ವಿಡಿಯೋದಲ್ಲಿ ಬೈಕ್ ಅನ್ನು ಸೈಯದ್ ಎಂಬವರು ಧ್ವನಿ ಮೂಲಕವೇ ಸ್ಟಾರ್ಟ್ ಮಾಡುವಂತೆ ತೋರಿಸಲಾಗಿದೆ. ಇದಲ್ಲದೆ ಬೈಕ್ ಸ್ಟಾಂಡ್ ಹಾಕುವ, ಹಾಡು ಪ್ಲೇ ಆಗುತ್ತದೆ,
ಸೈಯದ್ ಬೈಕ್ ಬಳಿ ಬಂದು ಸ್ಟಾರ್ಸ್ ಎಂದರೆ ಸಾಕು ಬೈಕ್ ಸ್ಟಾರ್ಟ್ ಆಗುತ್ತದೆ. ಸ್ಟಾಂಡ್ ಎಂದ್ರೆ ಇದಾಗಿಯೇ ಸ್ಟಾಂಡ್ ಹಾಕಿಕೊಳ್ಳುತ್ತದೆ. ಗಾನಾ ಎಂದರೆ ಬೈಕ್ನಲ್ಲಿರುವ ಸ್ಪೀಕರ್ ಮೂಲಕ ಹಾಡು ಕೇಳಿಸುತ್ತದೆ. ಇನ್ನೂ ಬೈಕ್ನಲ್ಲಿ ಚಿಕ್ಕೊಂದು ಎಟಿಎಂ ಇದ್ದು, ಸೈಯದ್ ಈ ಎಟಿಎಂ ಬಳಿ ಬಂದು ಪಾಂಚ್ ರೂಪಾಯಿ ದೇ ಎಂದ್ರೆ 5 ರೂ. ಕಾಯಿನ್ ಬರುತ್ತದೆ.
ಕೆಲವು ನೆಟ್ಟಿಗರು ಇದನ್ನು , ದೂರದೃಷ್ಟಿ ಮತ್ತು ಪ್ರತಿಭೆ" ಎಂದರೆ " ಅಪರೂಪದ ಹೊಸ ಆವಿಷ್ಕಾರ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. "ಸೂಪರ್ ಬೈಕ್," ಇನ್ನೊಬ್ಬರು ಬರೆದಿದ್ದಾರೆ.