ಬೆಂಗಳೂರು, ಅ 16 (DaijiworldNews/SM): ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರ ರಾಜೀನಾಮೆ ಅಂಗೀಕಾರಗೊಂಡಿದೆ. ಅಣ್ಣಾಮಲೈ ಲೋಕಸಭೆ ಚುನಾವಣೆಯ ಫಲಿತಾಂಶ ಘೋಷಣೆಯಾದ ಬಳಿಕ2019ರ ಮೇ 28ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ನೀಡುವ ಸಂದರ್ಭ ಅಣ್ಣಾಮಲೈ ಬೆಂಗಳೂರಿನ ಡಿಸಿಪಿಯಾಗಿದ್ದರು.
ಅಣ್ಣಾಮಲೈ ಓರ್ವ ದಕ್ಷ ಹಾಗೂ ನಿಷ್ಟಾವಂತ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ತಮ್ಮ ಇಲಾಖೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಕೀರ್ತಿ ಅವರದಾಗಿತ್ತು. ಕ್ರಿಮಿನಲ್ ಗಳು ಹಾಗೂ ಸಮಾಜಘಾತಕ ಶಕ್ತಿಗಳ ವಿರುದ್ಧ ಸೂಕ್ತವಾದ ಕ್ರಮಕೈಗೊಂಡಿದ್ದರು.
ಇನ್ನು ಉಡುಪಿ ಜಿಲ್ಲೆಯಲ್ಲಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಪ್ರಾಮಾಣಿಕೆಯ ಸೇವೆಯ ಮೂಲಕ ಅಣ್ಣಮಲೈ ಗುರುತಿಸಿಕೊಂಡಿದ್ದರು. ಹಾಗೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ವರ್ಗಾವಣೆ ಸಂದರ್ಭದಲ್ಲಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಪ್ರತಿಭಟನೆ ಕೂಡ ನಡೆಸಿದ್ದರು.
ಇದೀಗ ಅವರ ರಾಜೀನಾಮೆ ಅಂಗೀಕಾರಗೊಂಡಿದೆ.