ಶ್ರೀನಗರ, ಅ.17(Daijiworld News/SS): ಅಠಾರಿಯ ರೈಲ್ವೇ ಟ್ರಾಕ್ ಬಳಿ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನ ಮಾಡಿದ್ದ ಉಗ್ರನನ್ನು, ಯೋಧರು ಹೊಡೆದುರುಳಿಸಿದ್ದಾರೆ.
ಭಾರತ- ಪಾಕಿಸ್ಥಾನ ಗಡಿಯ ಅಠಾರಿ ಭಾಗದಲ್ಲಿ ಗಡಿ ರಕ್ಷಣಾ ಪಡೆಯ ಯೋಧರು ಪಾಕ್ ಒಳನುಸುಳುಗಾರನನ್ನು ಹೊಡೆದುರುಳಿಸಿದ್ದು, ಈತನನ್ನು ಗುಲ್ ನವಾಜ್ ಎಂದು ಗುರುತಿಸಲಾಗಿದೆ.
ಅ.16ರ ರಾತ್ರಿಯ ವೇಳೆಗೆ ಗೇಟ್ ನಂ 103ರಲ್ಲಿ ವ್ಯಕ್ತಿಯೊಬ್ಬ ಗಡಿ ದಾಟುತ್ತಿರುವುದು ಯೋಧರ ಗಮನಕ್ಕೆ ಬಂದಿತ್ತು. ಈ ವೇಳೆ ಬಿಎಸ್'ಎಫ್ ಯೋಧರು ಆತನಿಗೆ ಹಿಂದೆ ಹೋಗುವಂತೆ ಸೂಚಿಸಿದ್ದು, ಆದರೆ ಆತ ನಿರಾಕರಿಸಿದ್ದ. ನಂತರ ಯೋಧರು ಆತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.