ಜಮ್ಮು, ಅ.17(Daijiworld News/SS): ಕಣಿವೆ ರಾಜ್ಯ ಜಮ್ಮು ಹಾಗೂ ಕಾಶ್ಮೀರದ ಕಥುವಾ ಜಿಲ್ಲೆಯ ಹಣ್ಣು ಮಾರಾಟಗಾರರು ತಂದ ಆ್ಯಪಲ್ ಪೆಟ್ಟಿಗೆಗಳಲ್ಲಿ ‘ವಿ ವಾಂಟ್ ಫ್ರೀಡಂ’, ‘ಐ ಲವ್ ಬುರ್ಹಾನ್ ವಾನಿ’ ಹಾಗೂ ‘ಝಾಕಿರ್ ಮೂಸಾ ಕಮ್ ಬ್ಯಾಕ್’ ಎಂದು ಬರೆದ ಆ್ಯಪಲ್ಗಳು ಕಂಡು ಬಂದಿದೆ.
ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ರೀತಿಯ ಸಂದೇಶಗಳನ್ನು ಬರೆದ ಆ್ಯಪಲ್ಗಳನ್ನು ಖರೀದಿಸಲು ಜನ ನಿರಾಕರಿಸುತ್ತಿದ್ದಾರೆ. ಮಾತ್ರವಲ್ಲ ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಲು ವಿಫಲವಾದರೆ, ಕಾಶ್ಮೀರ ಆ್ಯಪಲ್ಗಳನ್ನು ಬಹಿಷ್ಕರಿಸಲಾಗುವುದು ಎಂದು ಹಣ್ಣು ಮಾರಾಟಗಾರರು ತಿಳಿಸಿದ್ದಾರೆ.
ಆ್ಯಪಲ್ ಬಾಕ್ಸ್ಗಳು ಕಾಶ್ಮೀರದಿಂದ ಬಂದಿವೆ. ಇಂಗ್ಲಿಷ್ ಹಾಗೂ ಉರ್ದುವಿನಲ್ಲಿ ಸಂದೇಶ ಬರೆಯಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕಥುವಾ ಸಗಟು ಮಾರುಕಟ್ಟೆ ಅಧ್ಯಕ್ಷ ರೋಹಿತ್ ಗುಪ್ತಾ ನೇತೃತ್ವದಲ್ಲಿ ಹಣ್ಣು ಮಾರಾಟಗಾರರು ಇಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮಾತ್ರವಲ್ಲ, ಇದರ ಹಿಂದಿರುವ ಶಕ್ತಿಯ ವಿರುದ್ಧ ಆಡಳಿತ ಹಾಗೂ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.