ಯಾದಗಿರಿ, ಅ 17 (Daijiworld News/MSP): ನನ್ನ ಮತ್ತು ಸಿಎಂ ಯಡಿಯೂರಪ್ಪ ಅವರ ಮಧ್ಯೆ ಸಣ್ಣ ಮನಸ್ತಾಪವೂ ಇಲ್ಲ. ನಾನು ಎಲ್ಲಾ ವಿಚಾರಗಳನ್ನು ಮಾಹಿತಿಯನ್ನ ಸಿಎಂ ಯಡಿಯೂರಪ್ಪ ಅವರ ಮೂಲಕವೇ ತಿಳಿದುಕೊಳ್ಳುತ್ತಿದ್ದೇನೆ, ಅವರೇ ನನ್ನ ಮಾರ್ಗದರ್ಶಕರಾಗಿದ್ದಾರೆ. ಮಾತ್ರವಲ್ಲದೇ ಈ ರಾಜ್ಯದ ಮಾರ್ಗದರ್ಶಕರು ಹಾಗೂ ಸುಪ್ರೀಂ ಕೂಡಾ ಅವರೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಯಾದಗಿರಿ ನಗರದ ಸರ್ಕಿಟ್ ಹೌಸ್ ನಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಕಚೇರಿಯಲ್ಲಿ ಯಡಿಯೂರಪ್ಪ ಹಾಗೂ ಕಟೀಲ್ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ರೀತಿಯ ಯಾವುದೆ ಘಟನೆ ನಡೆದಿಲ್ಲ. ಇದೆಲ್ಲ ಸಮಾಜಿಕ ಜಾಲತಾಣದಲ್ಲಿ ಪ್ರಚಾರವಾಗುವ ತಪ್ಪು ಕಲ್ಪನೆಗಳಷ್ಟೇ ಎಂದು ಹೇಳಿದರು.
ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದಿಂದ ನೀಡಿದ ಶೋಕಾಸ್ ನೋಟಿಸ್ ನೀಡಿದ ವಿಚಾರವಾಗಿ ಮಾತನಾಡಿದ, ಅವರು ನಮ್ಮ ಪಕ್ಷಕ್ಕೆ ಅದರದ್ದೇ ಆದ ನೀತಿ, ರೀತಿಗಳಿವೆ. ಅದನ್ನು ಅನುಸರಿಸಿಕೊಂಡು ಹೋಗುವುದು ಕಾರ್ಯಕರ್ತರ ಕರ್ತವ್ಯ. ಆತ ಎಷ್ಟೇ ಗಣ್ಯ ವ್ಯಕ್ತಿ ಆದರೂ ಅವರು ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತ.ಒಂದು ವೇಳೆ ಇಲ್ಲಿ ವ್ಯತ್ಯಾಸ ಹೈಕಮಾಂಡ್ ವಿವರಣೆ ಕೇಳೋದು ಸಹಜ. ನಾನು ರಾಜ್ಯದ್ಯಕ್ಷ ಒಂದು ವೇಳೇ ನನ್ನಿಂದ ತಪ್ಪಾದರೆ, ವಿವರಣೆ ಕೇಳಿದಾಗ ಅದಕ್ಕೆ ಉತ್ತರಿಸುವುದು ನನ್ನ ಜವಾಬ್ದಾರಿ. ಒಂದು ವೇಳೆ ಉತ್ತರ ಕೊಡದೆ ಹೋದರೆ ಅದು ಅಹಂಕಾರವಾಗುತ್ತದೆ ಎಂದು ಯತ್ನಾಳ್ ಗೆ ಟಾಂಗ್ ನೀಡಿದರು