ಮುಂಬೈ, ಅ.17(Daijiworld News/SS): ಎನ್'ಡಿಎ ಸರ್ಕಾರದ ನಿರಾಸಕ್ತಿ ಮತ್ತು ವಿಳಂಬ ನೀತಿಯಿಂದ ಇಂದು ದೇಶದ ಆರ್ಥಿಕ ಸ್ಥಿತಿ ತೀವ್ರವಾಗಿ ಕುಸಿದು ಹೋಗಿದೆ ಎಂದು ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ ಮನಮೋಹನ್ ಸಿಂಗ್ ಹೇಳಿದ್ದಾರೆ.
ದೇಶದ ಆರ್ಥಿಕತೆ ಬಗ್ಗೆ ಕಿಡಿಕಾರಿದ ಅವರು, ಪುಣೆಯ ಆಟೊಮೊಬೈಲ್ ವಲಯದಲ್ಲಿನ ಉದ್ಯಮ ಪಾತಾಳಕ್ಕೆ ಇಳಿದಿದೆ. ಮಹಾರಾಷ್ಟ್ರದಲ್ಲಿ ಹಲವು ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿವೆ. ಆರ್ಥಿಕ ಹಿಂಜರಿತದಿಂದ ಮಹಾರಾಷ್ಟ್ರ ರಾಜ್ಯದ ಮೇಲೆ ತೀವ್ರ ಹೊಡೆತ ಬಿದ್ದಿದೆ. ಆದರೆ ಸರ್ಕಾರ ಬೇರೆಯವರ ಮೇಲೆ ಆಪಾದನೆ ಹೊರಿಸುವ ಪ್ರಯತ್ನದ ಗೀಳಿನಲ್ಲಿಯೇ ಇದೆ ಎಂದು ಟೀಕಿಸಿದರು.
ದೇಶದ ಆರ್ಥಿಕ ಬಿಕ್ಕಟ್ಟಿನ ಸ್ಥಿತಿಯಿಂದ ಹೊರಬರಲು ಕಾರ್ಮಿಕ ತೀವ್ರ ಕೈಗಾರಿಕೆಗಳ ಸ್ಥಾಪನೆ ಒಳಗೊಂಡು ಹಲವು ಕ್ರಮ ಕೈಗೊಳ್ಳಬೇಕು. ಹಿಂದೆ ವಾಣಿಜ್ಯ ನಗರಿ ಮುಂಬೈ ಒಳಗೊಂಡಂತೆ ಇಡೀ ಮಹಾರಾಷ್ಟ್ರ ಹೂಡಿಕೆಯಲ್ಲಿ ನಂಬರ್ 1 ಸ್ಥಾನದಲ್ಲಿತ್ತು, ಆದರೆ ಇಂದು ರೈತರ ಆತ್ಮಹತ್ಯೆಯಲ್ಲಿ ನಂಬರ್ 1 ಆಗಿದೆ ಎಂದು ಟೀಕಿಸಿದರು.