ನವದೆಹಲಿ, ಅ.18(Daijiworld News/SS): ಹಿಂದಿನ ಸರ್ಕಾರವು ಹಣಕಾಸಿನ ಸ್ಥಿತಿ ಅರಿವಿಲ್ಲದೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಇನ್ನೂ ಐದಾರು ವರ್ಷ ಹಣಕಾಸು ಕ್ರೂಡೀಕರಣ ಮಾಡಿದರೂ ಅಭಿವೃದ್ಧಿ ಕಾರ್ಯ ಪೂರೈಸುವುದು ಕಷ್ಟ. ಹಿಂದಿನ ಸರ್ಕಾರವು ಹಣಕಾಸಿನ ಸ್ಥಿತಿ ಅರಿವಿಲ್ಲದೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ ಎಂದು ಯಡಿಯೂರಪ್ಪ ದೂರಿದರು.
ನೆರೆ ಪರಿಸ್ಥಿತಿ ಇರುವ ಕಡೆಗಳಲ್ಲಿ ಸರ್ಕಾರವು ಹೆಚ್ಚಿನ ಹಣಕಾಸು ಖರ್ಚು ಮಾಡುತ್ತಿದೆ. ಅಲ್ಲಿನ ಪರಿಹಾರ ಕಾರ್ಯ, ಪುನರ್ವಸತಿ ಇನ್ನಿತರೆ ಕಾರ್ಯಗಳ ಬಗ್ಗೆ ಹೆಚ್ಚಿನ ಗಮನವಹಿಸಿದೆ. ಹಾಗಾಗಿ ಉಳಿದ ಕ್ಷೇತ್ರಗಳತ್ತ ಸೂಕ್ತಗಮನ ವಹಿಸಲಾಗಿಲ್ಲವೆಂದು ಸಬೂಬು ಹೇಳಿದರು.
ರಾಜ್ಯದ ಹಣಕಾಸು ಸ್ಥಿತಿ ಹೇಗಿದೆ ಎಂದು ನನಗೆ ಮಾತ್ರ ಗೊತ್ತಿದೆ. ನೀರಾವರಿ ವಿಚಾರದಲ್ಲಿ ಅನ್ಯಾಯ ಮಾಡುವ ವ್ಯಕ್ತಿ ನಾನಲ್ಲ. ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಭವಿಷ್ಯದಲ್ಲಿ ನೀರಾವರಿಗೆ ಹಾಗೂ ಅಭಿವೃದ್ಧಿ ಯೋಜನೆಗೆ ಹಣಕಾಸು ನೀಡುತ್ತೇನೆ ಎಂದು ಹೇಳಿದರು.