ಬೆಳಗಾವಿ, ಅ 19 (DaijiworldNews/SM): ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ. ಈ ನಡುವೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಖಚಿತ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ಸಚಿವ ಸಿ.ಟಿ. ರವಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಸುಪ್ರೀಂ ತೀರ್ಪು ರಾಮಮಂದಿರ ಪರವಾಗಿ ಬರಲಿದ್ದು, ಮಂದಿರ ನಿರ್ಮಾಣ ಖಚಿತ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸಿ.ಟಿ. ರವಿ ಅಯೋಧ್ಯೆ ವಿಚಾರಕ್ಕೆ ಸಂಬಂಧಿಸಿದ ತೀರ್ಪು ನಮ್ಮ ಪರವಾಗಿ ಬರಲಿದೆ. ಆ ಮೂಲಕ ಕಳೆದ ಹಲವು ವರ್ಷಗಳ ನಮ್ಮ ಬೇಡಿಕೆ ಈಡೇರಲಿದ್ದು, ಮಂದಿರ ನಿರ್ಮಾಣ ಖಚಿತ ಎಂದಿದ್ದಾರೆ.
ಈಗಾಗಲೇ ವಿವಾದದ ಕುರಿತಂತೆ ಸುಪ್ರೀಂ ವಾದ-ಪ್ರತಿವಾದಗಳನ್ನು ಆಳಿಸಿದೆ. ವಿಚಾರಣೆಯನ್ನು ಪೂರ್ಣಗೊಳಿಸಿದೆ. ಇನ್ನು ತೀರ್ಪು ಪ್ರಕಟಿಸಲಷ್ಟೇ ಬಾಕಿ ಇದೆ. ತೀರ್ಪಿಗಾಗಿ ನಾವು ಕಾಯುತ್ತಿದ್ದೇವೆ. ಬಳಿಕ ಬಿಜೆಪಿ ನಿರ್ಣಾಯಕ ಹೆಜ್ಜೆಯನ್ನಿಡಲಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಲಿದ್ದೇವೆ ಎಂದು ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ.