ನವದೆಹಲಿ, ಅ 20 (Daijiworld News/MSP): ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಚಾರವನ್ನು ಬಹಿರಂಗವಾಗಿ ಪ್ರಸ್ತಾಪಿಸಿ ಪಾಕಿಸ್ತಾನಕ್ಕೆ, ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಪಿ ಎರ್ಡೊಗನ್ ಬೆಂಬಲವನ್ನು ಸೂಚಿಸಿದ್ರು. ಈ ಬೆಳವಣಿಗೆಯ ಹಿನ್ನಲೆಯಲ್ಲಿ , ಈ ತಿಂಗಳ ಅಂತ್ಯದಲ್ಲಿ ನಿಗದಿಯಾಗಿದ್ದ ಎರಡು ದಿನಗಳ ಟರ್ಕಿ ಪ್ರವಾಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರದ್ದುಗೊಳಿಸಿದ್ದಾರೆ.
ಟರ್ಕಿ ಪ್ರವಾಸವನ್ನು ಪ್ರಧಾನಿ ಮೋದಿ ಅವರು ಅ .27 ಮತ್ತು 28ರಂದು ಕೈಗೊಳ್ಳಲಿದ್ದರು. ಮೋದಿ ಅವರು ಸೌದಿಯಿಂದ ಟರ್ಕಿಯ ರಾಜಧಾನಿ ಅಂಕಾರಾಗೆ ತೆರಳಿ ಅಲ್ಲಿ ಬೃಹತ್ ಹೂಡಿಕೆ ಸಮಾವೇಶದಲ್ಲಿ ಭಾಗವಹಿಸಬೇಕಿತ್ತು. ಆದರೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಪಿ ಎರ್ಡೊಗನ್ ಪ್ಯಾರಿಸ್ ನಲ್ಲಿ ನಡೆದಿದ್ದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅವರು ಕಾಶ್ಮೀರ ವಿಚಾರ ಪ್ರಸ್ತಾಪಿಸಿ ಪಾಕ್ ಬೆಂಬಲಿಸಿ, ಪಾಕಿಸ್ತಾನವನ್ನು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್)ನ ಕಪ್ಪುಪಟ್ಟಿಗೆ ಸೇರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ಪ್ರಧಾನಿ ತಮ್ಮ ಟರ್ಕಿ ಪ್ರವಾಸ
ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ವಿದೇಶಾಂಗ ಸಚಿವಾಲಯ, ಪ್ರಧಾನಿ ಅವರ ಟರ್ಕಿ ಪ್ರವಾಸ ಫೈನಲ್ ಆಗಿರಲಿಲ್ಲ. ಹೀಗಾಗಿ ರದ್ದುಗೊಳಿಸುವ ಪ್ರಶ್ನೆಯೇ ಬಂದಿಲ್ಲ ಎಂದಿದ್ದಾರೆ.