ವಿಜಯಪುರ, ಅ 20 (Daijiworld News/MSP): ಹೆಗ್ಗಣ ಕಚ್ಚಿ ಮಗು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಸಿಂದಗಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಸುರಗಿಹಳ್ಳಿ ನಿವಾಸಿಗಳಾದ ಗೀತಾ ಮತ್ತು ಗೋಲಪ್ಪ ದಂಪತಿಯ ಆರು ತಿಂಗಳ ಗಂಡು ಮಗು ಸಾವನ್ನಪ್ಪಿದೆ. ಗಂಡ ಮತ್ತು ಮಗುವಿನೊಂದಿಗೆ ಗೀತಾ ತನ್ನ ತವರಿಗೆ ಆಗಮಿಸಿದ್ದರು ಶನಿವಾರ ರಾತ್ರಿ ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡು ದಂಪತಿ ಮಲಗಿದ್ದರು. ಈ ಸಂದರ್ಭದಲ್ಲಿ ಮಗುವಿನ ಬಲಗಾಲಿಗೆ ಬಲವಾಗಿ ಕಚ್ಚಿರುವ ಹೆಗ್ಗಣ ಮಗುವನ್ನು ಎಳೆದಾಡಿದೆ. ಈ ಸಂದರ್ಭ ಮಗು ಕವುಚಿ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದೆ.
ಗಾಡ ನಿದ್ದೆಯಲ್ಲಿದ್ದ ತಂದೆ ತಾಯಿಗೆ ಮಗು ಸಾವನ್ನಪ್ಪುವ ಸಮಯದಲ್ಲಿ ಎಚ್ಚರವಾಗಿಲ್ಲ. ಮಗುವಿನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಕಲಕೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.