ನವದೆಹಲಿ, ಅ.20(Daijiworld News/SS): ಎಲ್'ಒಸಿಗೆ ಹೊಂದಿಕೊಂಡಿರುವ ಕುಪ್ವಾರದ ತಂಗ್ಧರ್ನಲ್ಲಿ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.
ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಇಬ್ಬರು ಭಾರತೀಯ ಯೋಧರು ಸೇರಿದಂತೆ, ಕನಿಷ್ಠ ಇಬ್ಬರು ನಾಗರಿಕರಿಗೆ ತೀವ್ರ ಗಾಯಗಳಾಗಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ರಾತ್ರಿ 10 ಗಂಟೆಗೆ ಗುಂಡಿನ ದಾಳಿ ಆರಂಭಿಸಿದ ಪಾಕ್, ಭಾನುವಾರ ಬೆಳಗಿನ ಜಾವ 4 ಗಂಟೆವರೆಗೂ ಮುಂದುವರಿಸಿದೆ. ಭಾರತದೊಳಗೆ ನುಸುಳಲು ಉಗ್ರರಿಗೆ ಅನುವು ಮಾಡಿಕೊಡುವ ಸಲುವಾಗಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ನಮ್ಮ ಸೇನಾ ಪಡೆಗಳೂ ಪಾಕ್'ಗೆ ತಕ್ಕ ಪ್ರತ್ಯುತ್ತರ ನೀಡಿವೆ ಎಂದು ಭಾರತೀಯ ಸೇನಾ ಮೂಲಗಳು ಮಾಹಿತಿ ನೀಡಿವೆ.