ಚೆನ್ನೈ, ಅ.22(Daijiworld News/SS): ಸತತ 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದ ವೈದ್ಯರು ಗೋವಿನ ಹೊಟ್ಟೆಯಿಂದ ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್ ಹೊರ ತೆಗೆದಿರುವ ಘಟನೆಯೊಂದು ವರದಿಯಾಗಿದೆ.
ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯರು ಗೋವಿನ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತುಂಬಿಕೊಂಡಿದ್ದ ಕಾರಣದಿಂದ ಗೋವು ಭಾರೀ ನೋವು ಅನುಭವಿಸಿತ್ತು. ಇಷ್ಟೇ ಅಲ್ಲದೇ ಈ ಗೋವು ನೀಡುತ್ತಿದ್ದ ಹಾಲಿನ ಪ್ರಮಾಣವೂ ಕಡಿಮೆಯಾಗಿತ್ತು.
ಹೀಗಾಗಿ ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯರು ಅಕ್ಟೋಬರ್ 18ರಂದು 11 ಗಂಟೆಗೆ ಗೋವಿಗೆ ಆಪರೇಷನ್ ನಡೆಸಿದ್ದರು. ಒಟ್ಟು 5 ಗಂಟೆ 30 ನಿಮಿಷಗಳ ಕಾಲ ಈ ಶಸ್ತ್ರ ಚಿಕಿತ್ಸೆ ನಡೆದಿತ್ತು ಎನ್ನಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ವೈದ್ಯರು ಗೋವಿನ ಹೊಟ್ಟೆಯಿಂದ ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್ ಹೊರ ತೆಗೆದಿದ್ದಾರೆ.