ಎರ್ನಾಕುಲಂ,ಅ 22 (Daijiworld News/MSP): ಮಹಿಳೆಯಾಗಿ ಅತ್ಯಾಚಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕಾಂಗ್ರೆಸ್ ಸಂಸದರ ಪತ್ನಿಯೊಬ್ಬರು ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ಕಾಂಗ್ರೆಸ್ ಸಂಸದ ಹಿಬಿ ಈಡನ್ ಪತ್ನಿ ಅನ್ನಾ ಲಿಂಡಾ ಈಡನ್ ಅತ್ಯಾಚಾರದ ಬಗ್ಗೆ ಹೇಳಿರುವ ವಿವಾದಾತ್ಮಕ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವಿರೋಧಕ್ಕೆ ಕಾರಣವಾಗಿದೆ.
" ಹಣೆಬರಹ ಅನ್ನೋದು ಅತ್ಯಾಚಾರವಿದ್ದಂತೆ. ಅದನ್ನು ತಡೆಯಲು ಸಾಧ್ಯವಾಗದೆ ಹೋದಲ್ಲಿ ಎಂಜಾಯ್ ಮಾಡಿ. ಹಣೆಬರಹ ಸರಿಯಾಗಿಲ್ಲವೆಂದು ಕೊರಗಬೇಡಿ" ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಕೇರಳದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈಡನ್ ಅವರ ಮನೆ ಮುಂಭಾಗ ನೀರು ಆವರಿಸಿದ್ದು, ನೆರೆ ಉಂಟಾಗಿದೆ. ತಮ್ಮ ಪರಿಸ್ಥಿತಿಯನ್ನು ವಿವರಿಸುವ ನಿಟ್ಟಿನಲ್ಲಿ ಈ ಹೇಳಿಕೆ ನೀಡಿದ್ದಾರೆ.
ಇದ್ರ ಜೊತೆ ಎರಡು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜವಬ್ದಾರಿಯುತ ಸ್ಥಾನದಲ್ಲಿರುವ ಅನ್ನಾ ಲಿಂಡಾ ಅವರ ಈ ಪೋಸ್ಟ್ ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಇದಾದ ಬಳಿಕ ಪೋಸ್ಟ್ ಡಿಲಿಟ್ ಮಾಡಿದ್ದಾರೆ. ಅನ್ನಾ ಪತಿ ಹಿಬಿ ಎರ್ನಾಕುಲಂ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.