ನವದೆಹಲಿ,ಅ 22 (DaijiworldNews/SM): ದೇಶದ ರಕ್ಷಣಾ ವಿಚಾರಕ್ಕೆ ಬಂದಾಗ ಯಾರಾದರೂ ದೇಶದ ಮೇಲೆ ಕೆಂಗಣ್ಣು ಬೀರುವ ಯತ್ನ ಮಾಡಿದ್ದಲ್ಲಿ ಅವರಿಗೆ ತಕ್ಕ ಶಾಸ್ತ್ರ ಮಾಡಲು ಹಾಗೂ ಬುದ್ದಿ ಕಲಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಯುದ್ಧದ ವಿಚಾರ ಬಂದಾಗ ಭಾರತ ಸುಮ್ಮನಿರುವುದಿಲ್ಲ. ಹಾಗಂತ ಯಾರಮೇಲೂ ನಾವು ಆಕ್ರಮಕ್ಕೆ ನಾವು ಮೊದಲಿಗಾರಿ ಮುಂದಾಗುವುದಿಲ್ಲ. ಯಾರಾದರೂ ನಮ್ಮ ಮೇಲೆ ಆಕ್ರಮಣ ಮಾಡಿದರೆ ಅವರಿಗೆ ಸೂಕ್ತ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.
ಇತಿಹಾಸದಲ್ಲಿ ಇಲ್ಲಿಯ ತನಕ ಭಾರತ ತಾನಾಗಿಯೇ ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿಲ್ಲ. ಇನ್ನು ಮುಂದೆಯೂ ಆಕ್ರಮಣ ಮಾಡುವುದಿಲ್ಲ. ಯಾವುದೇ ಪ್ರದೇಶವನ್ನು ವಶಪಡಿಸಿಕೊಳ್ಳಲು ಭಾರತ ಪ್ರಯತ್ನಿಸಲಿಲ್ಲ ಎಂಬುದು ಭಾರತದ ಸ್ವಭಾವ. ಆದರೆ ಯಾರಾದರೂ ಭಾರತದ ಮೇಲೆ ಕೆಂಗಣ್ಣು ಬೀರಲು ಪ್ರಯತ್ನಿಸಿದರೆ ಭಾರತೀಯ ಸೇನೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ರಕ್ಷಣಾ ಸಚಿವರು ಎಚ್ಚರಿಕೆ ರವಾನಿಸಿದ್ದಾರೆ.