ಜಮ್ಮು, ಅ.23(Daijiworld News/SS): ಮೆಂದಾರ್ ಸೆಕ್ಟರ್'ನ ಬಾಲಕೋಟ್ ಪ್ರದೇಶದಾದ್ಯಂತ ಮೊರ್ಟಾರ್ ಶೆಲ್ಲಿಂಗ್ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಪೊಂಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಪಾಕಿಸ್ತಾನ ಸೇನೆಯಿಂದ ಇಂದು ಭಾರೀ ಶೆಲ್ಲಿಂಗ್ ದಾಳಿ ನಡೆಸಲಾಗಿದ್ದು, ಇಬ್ಬರು ನಾಗರಿಕರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಾತ್ರವಲ್ಲ, ಭಾರತೀಯ ಸೇನೆಯಿಂದ ಪ್ರತ್ಯುತ್ತರ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ಪಾಕ್ ಶೆಲ್ಲಿಂಗ್ ದಾಳಿಯಿಂದಾಗಿ ಗಾಯಗೊಂಡಿದ್ದ ಇಬ್ಬರು ನಾಗರಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶೆಲ್ಲಿಂಗ್ ದಾಳಿಯಾಗುತ್ತಿರುವ ಗ್ರಾಮಸ್ಥರು ಮನೆ ಹಾಗೂ ಬಂಕರ್ಸ್ ಕೆಳಗಡೆ ರಕ್ಷಣೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.