ನವದೆಹಲಿ, ಅ.23(Daijiworld News/SS): ಅ.22ರಂದು ಅನರ್ಹ ಶಾಸಕರ ವಿಚಾರಣೆಯನ್ನು ಮುಂದೂಡಿದ ನ್ಯಾಯಪೀಠ, ಇಂದು ಮತ್ತು ನಾಳೆ ಅನರ್ಹರ ಪ್ರಕರಣದ ವಿಚಾರಣೆ ನಡೆಸಲಿದೆ.
ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ಸಂಬಂಧ ರಾಜ್ಯ ಹೈಕೋರ್ಟ್ಗೆ ಕಾಂಗ್ರೆಸ್ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ತಡೆ ನೀಡಬೇಕು ಎಂಬ ಕೇಂದ್ರ ಚುನಾವಣಾ ಆಯೋಗದ ಬೇಡಿಕೆಗೆ ಸ್ಪಂದಿಸಿರುವ ಸುಪ್ರೀಂಕೋರ್ಟ್, ಈ ಸಂಬಂಧ ಅರ್ಜಿ ಸಲ್ಲಿಕೆಗೆ ಸೂಚಿಸಿದೆ.
ಅನರ್ಹ ಶಾಸಕರು ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಇಲ್ಲಿ ವಿಚಾರಣೆ ನಿಗದಿಯಾಗಿರುವಾಗ ನೀವೇಕೆ ಹೈಕೋರ್ಟ್'ನಲ್ಲಿ ದಾವೆ ಹೂಡಿದ್ದೀರಿ ಎಂದು ಕಾಂಗ್ರೆಸ್ ನಡೆಗೆ ಅಸಮಾಧಾನ ಹೊರಹಾಕಿದ ನ್ಯಾ.ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ, ಚುನಾವಣೆ ಮುಂದೂಡುವ ತೀರ್ಮಾನವನ್ನು ನಿಮ್ಮ ಮುಂದೆಯೇ ತೆಗೆದುಕೊಂಡಿದ್ದಲ್ಲವೇ ಎಂದು ಪ್ರಶ್ನಿಸಿದೆ.
ಇದಕ್ಕೆ ವಕೀಲ ಶಶಿಕಿರಣ್ ಶೆಟ್ಟಿ ಪ್ರತಿಕ್ರಿಯಿಸಿ, ಚುನಾವಣೆ ಮುಂದೂಡಿ ಎಂದು ನಾವು ಕೇಳಿಕೊಂಡಿಲ್ಲ. ನೀತಿ ಸಂಹಿತೆ ಜಾರಿಯಾಗದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದೇವೆ. ಈ ಅರ್ಜಿಗಳನ್ನು ತಮ್ಮಲ್ಲಿ ತರಿಸಿಕೊಂಡು ವಿಚಾರಣೆ ನಡೆಸುವುದಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳಿದ್ದರು.